Breaking
29 Jun 2026, Mon

ನೆರಿಯಲ್ಲಿ ಹೊಳೆಗೆ ಬಿದ್ದ ಸ್ಕೂಟರ್, ಸವಾರ ಪಾರು

ಬೆಳ್ತಂಗಡಿ: ನಿಯಂತ್ರಣ ತಪ್ಪಿದ ಸ್ಕೂಟರ್ ವೊಂದು ಹೊಳೆಗೆ ಬಿದ್ದ ಘಟನೆ ಬೆಳ್ತಂಗಡಿ ತಾಲೂಕಿನ ನೆರಿಯಲ್ಲಿ ಸೆ. 18ರಂದು ನಡೆದಿದೆ.

ಈ ಘಟನೆಯಲ್ಲಿ ಸವಾರ ಶಿವಾನಂದ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಶಿವಾನಂದ ಅವರು ಸೇತುವೆಯ ಸಮೀಪದ ಅಂಗಡಿಯ ಬಳಿಯಿಂದ ಸ್ಕೂಟರ್ ಸ್ಟಾಟ್ ಮಾಡಿ ಕೆಲವೇ ನಿಮಿಷದಲ್ಲಿ ಹೊಳೆಗೆ ಬಿದ್ದಿದೆ. ಸೇತುವೆಯ ತಡೆ ಗೋಡೆಯಲ್ಲಿ ಕೈ ಹಿಡಿದ ಪರಿಣಾಮವಾಗಿ ಅವರು ಅಪಾಯದಿಂದ ಪಾರಾಗಿದ್ದಾರೆ.

ಬಳಿಕ ಯುವಕರ ಸಹಾಯದಿಂದ ಸ್ಕೂಟರನ್ನು ಮೇಲೆತ್ತಲಾಯಿತು.

Leave a Reply

Your email address will not be published. Required fields are marked *