Breaking
20 Sep 2026, Sun

ಜವಾಹರ್ ಬಾಲ್ ಮಂಚ್ ಇದರ ಮಕ್ಕಳ ಒಕ್ಕೂಟದ ಕರ್ನಾಟಕ ರಾಜ್ಯ ಅಧ್ಯಕ್ಷರಾಗಿ ಶೌರ್ಯ ಎಸ್ ಆರ್ ಆಯ್ಕೆ

ಬಂಟ್ವಾಳ: ಜವಾಹರ್ ಬಾಲ್ ಮಂಚ್ ಇದರ ಮಕ್ಕಳ ಒಕ್ಕೂಟದ ಕರ್ನಾಟಕ ರಾಜ್ಯ ಅಧ್ಯಕ್ಷರಾಗಿ ಶೌರ್ಯ ಎಸ್ ಆರ್ ಆಯ್ಕೆಯಾಗಿದ್ದಾರೆ.

ಬಂಟ್ವಾಳದ ಡಾಕ್ಟರ್ ರಾಜೇಶ್ ಹಾಗೂ ನ್ಯಾಯವಾದಿ ಶೈಲಜಾ ರಾಜೇಶ್ ದಂಪತಿಗಳ ಪುತ್ರನಾಗಿರುವ ಇವರು ಉತ್ತಮ ವಾಗ್ಮಿಯಾಗಿದ್ದು, ಸಾಂಸ್ಕೃತಿಕ ಕ್ಷೇತ್ರ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ದ್ವಿತೀಯ ಪಿಯುಸಿ ವಿದ್ಯಾಭ್ಯಾಸವನ್ನು ಮುಗಿಸಿ ಮುಂದೆ ಮೆಡಿಕಲ್ ವಿದ್ಯಾಭ್ಯಾಸ ಮಾಡುವ ಹಂಬಲ ಹೊಂದಿರುವ ಇವರನ್ನು ರಾಜಸ್ಥಾನದ ಜೈಪುರದಲ್ಲಿ ನಡೆದ ರಾಷ್ಟ್ರಮಟ್ಟದ ಮಕ್ಕಳೋತ್ಸವದಲ್ಲಿ, ರಾಜ್ಯಾಧ್ಯಕ್ಷರಾದ ಮೈನುದ್ದಿನ್ ರವರ ಶಿಫಾರಸ್ಸಿನಂತೆ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಜಿ ವಿ ಹರಿ ಇವರು ಆಯ್ಕೆಯನ್ನು ಘೋಷಿಸಿದರು.

Leave a Reply

Your email address will not be published. Required fields are marked *