Breaking
24 Mar 2026, Tue

ಮಂಗಳೂರು: ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿ; ಸಾಧಕರಿಗೆ ಸನ್ಮಾನ

ಮಂಗಳೂರು : ಕರ್ನಾಟಕ ರಾಜ್ಯ ಭಾವೈಕ್ಯತಾ ಪರಿಷತ್ತು ಹಾಗೂ ಭಾರತೀಯ ಮಾದಕ ದ್ರವ್ಯ ವಿರೋಧಿ ಮಂಡಳಿಗಳ ವತಿಯಿಂದ ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ದೇರಳಕಟ್ಟೆಯ ನವಾಝ್ ಕಟ್ಟಡದ ಸಭಾಂಗಣದಲ್ಲಿ ಸೆ. 14ರಂದು ನಡೆಯಿತು.

ಕಾಯ೯ಕ್ರಮದಲ್ಲಿ ಅಬ್ದುಲ್ ಸಮದ್ ಬಾವ ಪುತ್ತೂರು, ಭೀಮರಾವ್ ವಾಸ್ಟರ್, ನಾರಾಯಣ ರೈ ಕುಕ್ಕುವಳ್ಳಿ ಸೇರಿದಂತೆ ಹಲವು ರಾಷ್ಟ್ರಮಟ್ಟದ ಖ್ಯಾತಿಯ ಸಾಧಕರಿಗೆ “ಸಾಧಕ ಸನ್ಮಾನ” ಹಾಗೂ ಕವಿಗಳಿಗೆ “ಸಾಹಿತ್ಯ ರತ್ನ ಪ್ರಶಸ್ತಿ” ನೀಡಿ ಗೌರವಿಸಲಾಯಿತು.

ಮೂಲವ್ಯಾಧಿ ತಜ್ಞ ಡಾ. ಸುರೇಶ ನೆಗಳಗುಳಿ,ಜಯಾನಂದ ಪೆರಾಜೆ, ಹಾ.ಮ. ಸತೀಶ್, ರತ್ನಾ ಕೆ. ಭಟ್, ವಿರಾಜ್ ಅಡೂರ್, ಉಮೇಶ್ ಕಾರಂತ್, ಬಶೀರ್ ಕೆ.ಎ., ಅಬ್ದುಲ್ ಅಜಿಜ್ ಪುಣಚ, ಅನಾರ್ಕಲಿ ಸಲೀಂ, ಶಾಂತಾ ಪುತ್ತೂರು, ಪೆರುಮಾಲ್ ಲಕ್ಷ್ಮಣ್ ಐವರ್ನಾಡ್ ಮತ್ತಿತರರಿಗೂ ಸನ್ಮಾನ ಸಲ್ಲಿಸಲಾಯಿತು.

ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಯು.ಟಿ.ಇಫ್ತಿಕಾರ್ ಅಲಿ, ಕವಿಗೋಷ್ಠಿ ಅಧ್ಯಕ್ಷ ನಾರಾಯಣ ರೈ ಕುಕ್ಕುವಳ್ಳಿ,ಮೊಹಮ್ಮದ್ ಕುಕ್ಕುವಳ್ಳಿ, ಸಾಹಿತಿ ಜ್ಯೋತಿಷಿ ಭೀಮರಾವ್ ವಾಸ್ಟರ್, ಅಬ್ಬುಬೋರ್ಕ ಅನಿಲಕಟ್ಟೆ, ಇಕ್ಬಾಲ್ ಕೈರಂಗಳ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *