Breaking
19 Sep 2026, Sat

ಭಟ್ಕಳದಲ್ಲಿ ಹುಂಡಿ ಕಳವು ಪ್ರಕರಣ : ಇಬ್ಬರು ಆರೋಪಿಗಳ ಬಂಧನ

ಭಟ್ಕಳ: ಹೆಬ್ಬೆ ಗ್ರಾಮದ ಶ್ರೀ ಅರಿಕಲ್ ಜಟಕೇಶ್ವರ ದೇವಸ್ಥಾನದಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಭಟ್ಕಳ ಗ್ರಾಮಾಂತರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಶಿರಾಲಿಯ ನಿವಾಸಿ ಹಸನ್ ಬ್ಯಾರಿ ಅವರ ಪುತು ಅಮೀರ್ ಮತ್ತು ಭಟ್ಕಳದ ನಿವಾಸಿ ಅಬ್ದುಲ್ ಗಫರ್ ಅವರ ಪುತ್ತು ಮೊಹಮ್ಮದ್ ಇಮಾನ್ ಎಂದು ಗುರುತಿಸಲಾಗಿದೆ.

ಸೆ.14 ರಂದು ದೇವಸ್ಥಾನದ ಹುಂಡಿಯನ್ನು ಒಡೆದು ಹಣವನ್ನು ಕಳವು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತ ಆರೋಪಿಗಳಿಂದ ಎರಡು ಮೋಟಾರ್ ಸೈಕಲ್‌ಗಳು ಹಾಗೂ ₹2,21,295 ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪುಕರಣ ದಾಖಲಾಗಿದೆ.

Leave a Reply

Your email address will not be published. Required fields are marked *