ಕ್ಯಾಬಿನೆಟ್ ಸಭೆಯಲ್ಲಿ ಕೆಂಪು ಕಲ್ಲಿನ ಸಮಸ್ಯೆಗಳೆಲ್ಲವನ್ನೂ ಬಗೆಹರಿಸಲಾಗಿದೆ – ಸ್ಪೀಕರ್ ಯು.ಟಿ. ಖಾದರ್ ಪ್ರತಿಕ್ರಿಯೆ

ಮಂಗಳೂರು: ಕ್ಯಾಬಿನೆಟ್ ಸಭೆಯಲ್ಲಿ ಕೆಂಪು ಕಲ್ಲಿನ ಸಮಸ್ಯೆಗಳೆಲ್ಲವನ್ನೂ ಬಗೆಹರಿಸಲಾಗಿದೆ ಎಂದು ವಿಧಾನ ಸಭಾ ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ.

ಕೆಂಪು ಕಲ್ಲು ಮರಳು ಸಮಸ್ಯೆಗಳ ಕುರಿತು ಬಿಜೆಪಿ ನಡೆಸುವ ಪ್ರತಿಭಟನೆಯ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೊನ್ನೆಯ ಕ್ಯಾಬಿನೆಟ್ ಸಭೆಯಲ್ಲಿ ಕೆಂಪು ಕಲ್ಲಿನ ಸಮಸ್ಯೆಗಳೆಲ್ಲವನ್ನೂ ಬಗೆಹರಿಸಲಾಗಿದೆ.

ಇನ್ನು ಮುಂದೆ ಕೆಂಪು ಕಲ್ಲಿನ ದರ ಹಿಂದಿನ ದರಕ್ಕಿಂತ ಜಾಸ್ತಿಯಾಗಿರಲು ಸಾಧ್ಯವಿಲ್ಲ. ಸರ್ಕಾರಕ್ಕೆ ಸಲ್ಲಿಸಬೇಕಾದ ರಾಜಧನವನ್ನು ಕಡಿಮೆಗೊಳಿಸಲಾಗಿದ್ದು, ಹಿಂದೆ ಇದ್ದ ಷರತ್ತುಗಳನ್ನು ಸರಳೀಕರಣಗೊಳಿಸಲಾಗಿದೆ. ಇನ್ನು ಮುಂದೆ ವ್ಯಾಪಾರಸ್ಥರು ಕೆಂಪು ಕಲ್ಲು ವ್ಯಾಪಾರವನ್ನು ಧೈರ್ಯದಿಂದ, ಸ್ವಾಭಿಮಾನದಿಂದ ಮಾಡಬಹುದು.

ಮೊದಲು ಪರ್ಮಿಟ್ ಇಲ್ಲದೆ ಕೆಂಪು ಕಲ್ಲು ತೆಗೆದು, ಯಾರ್ಯಾರಿಗೂ ಹಣ ಕೊಟ್ಟು ವ್ಯಾಪಾರ ಮಾಡ್ಬೇಕಿತ್ತು. ಆದರೆ ಇದೀಗ ಕಾನೂನು ಬದ್ದವಾಗಿ, ಆತ್ಮವಿಶ್ವಾಸ, ಸ್ವಾಭಿಮಾನದಿಂದ ವ್ಯಾಪಾರ ಮಾಡ್ಬಹುದು. ಇದಕ್ಕೆ ಮೊನ್ನೆ ಕ್ಯಾಬಿನೆಟ್ ಹಾಗೂ ಸಿಎಂ ಒಪ್ಪಿಗೆ ಸಿಕ್ಕಿದೆ. ಆರಂಭದಲ್ಲಿ 50ರಕಲ್ಲಿ ರಲ್ಲಿ 25 ಲೈಸೆನ್ಸ್ಗೆ ಪರ್ಮಿಟ್ ಕೊಡಲಾಗಿದೆ. ಬಾಕಿ ಇರುವ ಲೈಸೆನ್ಸ್ಗೆ ನೋಡಿಕೊಂಡು ಪರ್ಮಿಟ್ ಕೊಡಲಾಗುವುದು ಎಂದು ಖಾದರ್ ಹೇಳಿದರು.

ಜನಸಾಮಾನ್ಯರಿಗೆ ಸುಲಭ ಹಾಗೂ ಕಡಿಮೆ ದರದಲ್ಲಿ ಕೆಂಪು ಕಲ್ಲು ಸಿಗಬೇಕು. ಇನ್ನು ಮುಂದೆ ಹಿಂದಿನ ರೇಟ್ ಆಗಿರಲು ಸಾಧ್ಯವಿಲ್ಲ. ಹಿಂದಿನ ದರಕ್ಕಿಂತಲೂ ಕಲ್ಲು ಕಡಿಮೆ ಬೆಲೆಗೆ ಸಿಗಲಿದೆ. ಸ್ಯಾಂಡ್ ಬಝಾರ್ ರೀತಿ ಅಪ್ಲಿಕೇಷನ್ ರೀತಿ ಕಲ್ಲು ವಿತರಿಸುವ ಚಿಂತನೆ ಇದೆ ಈ ಬಗ್ಗೆ ಉಸ್ತುವಾರಿ ಸಚಿವರ ಜೊತೆ ಚರ್ಚಿಸಲಾಗುವುದು ಎಂದರು.

Leave a Reply

Your email address will not be published. Required fields are marked *