Breaking
19 Sep 2026, Sat

ಮಡಿಕೇರಿಯಲ್ಲಿ ಗೋಕಳ್ಳತನ ಮಾಡಿದ ಮೂವರು ಆರೋಪಿಗಳ ಬಂಧನ

ಮಡಿಕೇರಿ: ಗೋವನ್ನು ಕಳ್ಳತನ ಮಾಡಿದ ಆರೋಪದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ಕೊಡುಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನಲ್ಲಿ ನಡೆದಿದೆ.

ಬಂಧಿತ ಆರೋಪಿಗಳನ್ನು ಕೊಂಡ್ಲಗೇರಿ ಗ್ರಾಮದ ಆಶಿಕ್, ಶಾಹಿದ್ ಮತ್ತು ಹಾರಿಸ್ ಎಂದು ಗುರುತಿಸಲಾಗಿದೆ.

ಮೈತಾಡಿ ಗ್ರಾಮದ ಬೊಳ್ಳಪ್ಪಂಡ ಎಂ. ಭೀಮಯ್ಯ ಎಂಬವರಿಗೆ ಸೇರಿದ ಹಸುವನ್ನು ಆರೋಪಿಗಳು ಕಳ್ಳತನ ಮಾಡಿದ್ದು, ಪೊಲೀಸರು ಆರೋಪಿಗಳಿಂದ 2600 ರೂ. ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *