ಬೆಳ್ತಂಗಡಿ: ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆಯ ಪ್ರಯುಕ್ತ ರಸ್ತೆ ಅಪಘಾತದಲ್ಲಿ ಬೆನ್ನುಹುರಿ ಆಘಾತಕ್ಕೆ ಒಳಗಾಗಿ ಮೂರು ವರ್ಷ ಹಾಸಿಗೆಯಲ್ಲಿದ್ದ ಬಂಟ್ವಾಳದ ವ್ಯಕ್ತಿಗೆ ಬೆಳ್ತಂಗಡಿ ತಾಲೂಕಿನ ದಿವ್ಯಾಂಗರ ಪುನಶ್ಚೇತನ ಕೇಂದ್ರ ಸೌತಡ್ಕ ಸಂಸ್ಥೆಯ ಪರವಾಗಿ ಹತ್ತಿಯಿಂದ ಬತ್ತಿ ಮಾಡುವ ಯಂತ್ರವನ್ನು ಸೆ.10 ರಂದು ಹಸ್ತಾಂತರ ಮಾಡಲಾಯಿತು.

ಬಂಟ್ವಾಳ ತಾಲೂಕಿನ ಕೊಲ್ಲೂರು ಗ್ರಾಮದ ಭವಾನಿ ಶಂಕರ್ ಟಿ .ಕೆ ಎಂಬವರು ರವರು ಫೆಬ್ರವರಿ 3 2016 ರಂದು ರಸ್ತೆ ಅಪಘಾತದಲ್ಲಿ ಬೆನ್ನು ಹುರಿ ಆಘಾತಕ್ಕೆ ಒಳಗಾಗಿ ಮೂರು ವರ್ಷಗಳ ಕಾಲ ಹಾಸಿಗೆಯಲ್ಲಿ ಮಲಗಿದ್ದರು.
ಹೀಗಾಗಿ ಇವರು ಬೆಳ್ತಂಗಡಿ ತಾಲೂಕಿನ ಸೌತಡ್ಕದ ಸೇವಾಧಾಮದಲ್ಲಿ ಪುನಶ್ಚೇತನವನ್ನು ಪಡೆದುಕೊಂಡು ತನ್ನ ಕೆಲಸವನ್ನು ತಾನು ಮಾಡುವಷ್ಟು ಸಬಲರಾಗಿದ್ದಾರೆ. ಈಗ ಹತ್ತಿಯಿಂದ ಬತ್ತಿ ಮಾಡಿ ಸ್ವ ಉದ್ಯೋಗ ಮಾಡುವ ಮೂಲಕ ಜೀವನವನ್ನು ರೂಪಿಸಿಕೊಳ್ಳುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಈ ನಿಟ್ಟಿನಲ್ಲಿ ಸಂಸ್ಥೆಯ ಪರವಾಗಿ ಹತ್ತಿಯಿಂದ ಬತ್ತಿ ಮಾಡುವ ಯಂತ್ರವನ್ನು ಭವಾನಿ ಶಂಕರ್ ಟಿ .ಕೆ ಯವರಿಗೆ ಹಸ್ತಾಂತರಿಸಲಾಯಿತು.



