ಉಡುಪಿ: ಸಂಗೀತಾ ಮಾಂತ್ರಿಕ ಇಳಯರಾಜ ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಗೆ ಸುಮಾರು 4 ಕೋಟಿ ರೂ. ಮೌಲ್ಯದ ವಜ್ರ ಖಚಿತ ಕಿರೀಟ, ವೀರಭದ್ರ ದೇವರಿಗೆ ರಜತ ಕಿರೀಟ ಮತ್ತು ಖಡ್ಗವನ್ನು ಸೆ. 10 ರಂದು ಸಮರ್ಪಿಸಿದರು.

ಶ್ರೀದೇವಿ ಸನ್ನಿಧಿಗೆ ಈ ವಜ್ರ ಖಚಿತ ಕಿರೀಟವನ್ನು ಓಲಗ ಮಂಟಪದಿಂದ ಪುರಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಯಿತು.

ಇದೇ ವೇಳೆ ಮೂಕಾಂಬಿಕೆಯಿಂದಾಗಿ ತನ್ನ ಜೀವನದಲ್ಲಿ ಪವಾಡ ನಡೆದಿದೆ ಎಂದು ಇಳಯರಾಜ ತಿಳಿಸಿದ್ದಾರೆ. ಮಾತ್ರವಲ್ಲದೇ ವರ್ಷ ಹುಟ್ಟುಹಬ್ಬವನ್ನು ದೇವಸ್ಥಾದಲ್ಲೇ ಆಚರಣೆ ಮಾಡುತ್ತಿದ್ದು ಸಂಗೀತ ಸೇವೆಯನ್ನೂ ನೀಡುತ್ತಿದ್ದಾರೆ. ಈ ಹಿಂದೆಯೂ ಅನೇಕ ಬಾರಿ ದೇವಿಗೆ ಆಭರಣಗಳನ್ನು ಅರ್ಪಿಸಿದ್ದಾರೆ.




