ಬಂಟ್ವಾಳ: ಕಾವಳಮೂಡೂರು ಗ್ರಾಮದ ಬೊಳ್ಳಿಮಾರ್ ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ಅ. 04 ಶನಿವಾರದಂದು ಅಗೇಲು ಸೇವೆ ನಡೆಯಲಿದೆ.
ಸಂಜೆ 6:30 ಕ್ಕೆ ಅಗೇಲು ಸೇವೆ ಆರಂಭಗೊಳ್ಳಲಿದ್ದು ಅಗೇಲು ಸೇವೆ ನೀಡಲು ಇಚ್ಛಿಸುವ ಭಕ್ತಾಧಿಗಳು, ಅಥವ ಪರ್ವ ಸೇವೆ ನೀಡಲು ಬಯಸುವವರು ಅದೇ ದಿನ ಮಧ್ಯಾಹ್ನ 12:30ಕ್ಕಿಂತ ಮುಂಚಿತವಾಗಿ ಶ್ರೀ ಕ್ಷೇತ್ರಕ್ಕೆ ಕರೆ ಮಾಡಿ ತಿಳಿಸಬೇಕೆಂದು ಕ್ಷೇತ್ರದ ಧರ್ಮದರ್ಶಿಗಳಾದ ವಿಜಯ್ ಸಾಲ್ಯಾನ್ ಅವರು ತಿಳಿಸಿದ್ದಾರೆ.

ಭಕ್ತಾಧಿಗಳ ಬದುಕಲ್ಲಿ ಪವಾಡವೆಂಬಂತೆ ಕಾರ್ಣಿಕ ಮೆರೆದು, ಇಷ್ಟಾರ್ಥ ಸಿದ್ಧಿಸಿ ಬಂಟ್ವಾಳ ತಾಲೂಕು ಮಾತ್ರವಲ್ಲದೆ ರಾಜ್ಯದಲ್ಲೂ ಈ ಕ್ಷೇತ್ರ ಚಿರಪರಿಚಿತವಾಗಿದೆ. ಅದೆಷ್ಟೋ ಭಕ್ತಾಧಿಗಳ ಸಂಕಷ್ಟದ ದಿನಗಳನ್ನು ಪರಿಹರಿಸಿರುವ ಬೊಳ್ಳಿಮಾರು ಕೊರಗಜ್ಜ ದೈವಸ್ಥಾನಲ್ಲಿ ದಿನೇದಿನೇ ಭಕ್ತಾಧಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕ್ಯಾನ್ಸರ್, ಕಿಡ್ನಿ ಸಮಸ್ಯೆಗಳು ಸೇರಿದಂತೆ ಅನೇಕ ಆರೋಗ್ಯ ತೊಂದರೆಗಳಿಗೆ ಕೊರಗಜ್ಜ ದೈವದ ಕರಿಗಂಧ ಪ್ರಸಾದವೆ ಔಷಧವಾಗಿ ಪರಿಣಮಿಸಿದೆ ಎಂದು ಭಕ್ತಾಧಿಗಳು ಹೇಳುತ್ತಾರೆ.

ಉದ್ಯೋಗ, ಮದುವೆ ಹಾಗೂ ಇನ್ನೀತರ ಸಮಸ್ಯೆಗಳ ನಿವಾರಣೆಗೆ ಈ ಕ್ಷೇತ್ರದಲ್ಲಿ ಪ್ರಾರ್ಥಿಸಿದರೆ ಅದು ಫಲಿಸುತ್ತದೆ ಎಂಬುದು ಭಕ್ತರ ನಂಬಿಕೆ. ಆದಿತ್ಯವಾರ, ಮಂಗಳವಾರ, ಗುರುವಾರ ಕ್ಷೇತ್ರದಲ್ಲಿ ಪ್ರಶ್ನಾಚಿಂತನೆ ನಡೆಯುತ್ತದೆ.
ಸಂಪರ್ಕ ಸಂಖ್ಯೆ: 8088191227




