Breaking
22 Sep 2026, Tue

ಕೂಳೂರಿನಲ್ಲಿ ಮಹಿಳೆಯನ್ನು ಬಲಿ ಪಡೆದ ರಸ್ತೆ ಗುಂಡಿ

ಮಂಗಳೂರು: ಸ್ಕೂಟರ್ ರಸ್ತೆಯ ಗುಂಡಿಗೆ ಬಿದ್ದ ಪರಿಣಾಮ ಬಿದ್ದ ಸವಾರೆಯ ಮೇಲೆ ಮೀನಿನ ಲಾರಿ ಹರಿದು ಆಕೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಗಳೂರಿನ ಕೂಳೂರಿನಲ್ಲಿ ನಡೆದಿದೆ.

ಮೃತರನ್ನು ಖಾಸಗಿ ಆಸ್ಪತ್ರೆಯ ಉದ್ಯೋಗಿ ಮಾಧವಿ ಎಂದು ಗುರುತಿಸಲಾಗಿದೆ.

ಮಾಧವಿ ಅವರ ಸ್ಕೂಟರ್ ರಸ್ತೆ ಹೊಂಡಕ್ಕೆ ಬಿದ್ದಿದೆ. ಈ ವೇಳೆ ನಿಯಂತ್ರಣ ತಪ್ಪಿದ ಅವರು ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಮೀನು ತುಂಬಿದ ಟ್ರಕ್ ಅದರ ಮೇಲೆ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಮೂಲ್ಕಿಯಿಂದ ಪಂಪ್‌ವೆಲ್ ವರೆಗಿನ ಹೆದ್ದಾರಿಯಲ್ಲಿ ಬರೀ ಗುಂಡಿಗಳೇ ತುಂಬಿಕೊಂಡಿದೆ. ರಸ್ತೆ ದುರಸ್ತಿಗಾಗಿ ಪದೇ ಪದೇ ಮನವಿ ಮಾಡಿದರೂ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *