Breaking
23 Mar 2026, Mon

ಮುಸ್ಲಿಂ ತುಷ್ಟೀಕರಣಕ್ಕಾಗಿ ಹಿಂದೂಗಳ ಮೇಲೆ ದಾಳಿ : ಮಾಜಿ ಶಾಸಕ ಸಂಜೀವ ಮಠಂದೂರು ಆರೋಪ

ಪುತ್ತೂರು: ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶನ ವಿಸರ್ಜನೆಯ ಮೆರವಣಿಗೆಗೆ ಮಸೀದಿಯಿಂದ ಕಲ್ಲು ಎಸೆಯುವ ಮೂಲಕ ಭವ್ಯ ಮೆರವಣಿಗೆಗೆ ವಿಘ್ನ ತರುವ ಮೂಲಕ ಹಿಂದೂ ಸಮಾಜಕ್ಕೆ ಅಘಾತ ತರುವ ಕೆಲಸವನ್ನು ಮುಸ್ಲಿಂ ಮತಾಂಧರು ಮಾಡಿದ್ದಾರೆ. ಕಾಂಗ್ರೆಸ್ ಸರಕಾರದ ಮುಸ್ಲಿಂ ತುಷ್ಟೀಕರಣ ನೀತಿಯ ಕಾರಣದಿಂದ ಆ ಸರಕಾರ ಇದ್ದಾಗಲೆಲ್ಲಾ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ.

ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಇಲ್ಲದಂತೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಉದ್ದೇಶ ಪೂರ್ವಕವಾಗಿ ಜನರನ್ನು ರೊಚ್ಚಿಗೆಬ್ಬಿಸುವ ಕೆಲಸ ಆಗಿದೆ. ಅಲ್ಲಿಯ ಉಸ್ತುವಾರಿ ಸಚಿವರು ಮಸೀದಿಯಿಂದ ಎರಡು ಕಲ್ಲು ಬಿದ್ದಿದೆ ಎಂದಿರುವುದು ಇದು ಮುಸ್ಲಿಂ ಪ್ರಾಯೋಜಿತ ಕೃತ್ಯ ಎಂಬುದು ಸಾಭೀತಾಗಿದೆ. ಘಟನೆಗೆ ಮೊದಲೇ ಮಸೀದಿ, ಮದರಸ ಎದುರು ಸಿಬಂದಿ ನಿಯೋಜಿಸದೆ ಪೊಲೀಸ್ ಇಲಾಖೆ, ಸರಕಾರ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿದರು.

ಪ್ರತಿಭಟಿಸಿದವರಿಗೆ ಮಕ್ಕಳು, ಮಹಿಳೆಯರು ಎನ್ನದೆ ಲಾಠಿ ಏಟಿನ ಮೂಲಕ ಗದಾಪ್ರಹಾರ ಮಾಡಲಾಗಿದೆ. ಈ ಸರಕಾರಕ್ಕೆ ಮಹಿಳೆಯರ ಕಾಳಜಿ ಇಲ್ಲ. ಒಟ್ಟು ಹಿಂದೂಗಳನ್ನು ಮಟ್ಟ ಹಾಕಬೇಕೆನ್ನುವುದೇ ಸಿದ್ಧರಾಯಮ್ಯ ಸರಕಾರದ ಉದ್ದೇಶವಾಗಿದೆ. ಗೃಹ ಸಚಿವರಿಗೆ ಮಾರಣ ಹೋಮ ಆದರೆ ಮಾತ್ರ ನಿಮಗೆ ದೊಡ್ಡ ಘಟನೆಯಾ ? ಎಂದು ಪ್ರಶ್ನಿಸಿದ ಮಠಂದೂರು, ಈದ್ ಮಿಲಾದ್ ಸಮಯದಲ್ಲಿ ಯಾಕೆ ಗಲಾಟೆ ಆಗುವುದಿಲ್ಲ. ಯಾಕೆ ಹಿಂದೂಗಳು ಇಂತಹ ಅಹಿತಕರ ಘಟನೆಗಳಲ್ಲಿ ಭಾಗಿಯಾಗಿಲ್ಲ. ಈ ಸರಕಾರ ಹಿಂದೂ ಸಂಘಟನೆಗಳು, ಬಿಜೆಪಿ, ಜೆಡಿಎಸ್ ಗಳನ್ನು ಮಟ್ಟ ಹಾಕಲು ಮುಸ್ಲಿಂ ಓಲೈಕೆ ಮಾಡುತ್ತಿದ್ದಾರೆ. ಈ ಸರಕಾರದಿಂದ ಹಿಂದೂಗಳಿಗೆ ರಕ್ಷಣೆ ಸಿಗುವುದು ಕಾಣುವುದಿಲ್ಲ. ಹೋರಾಟದ ಮೂಲಕ ಇದಕ್ಕೆ ಉತ್ತರ ನೀಡುತ್ತೇವೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *