ಬಂಟ್ವಾಳ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪೆದಮಲೆ ಇಲ್ಲಿ ಇಂದು (ಸೆ.08) ಸಾಮೂಹಿಕ ಮಂತ್ರ ಪಠಣ ಜರಗಿತು.

ಕಾರ್ಯಕ್ರಮದಲ್ಲಿ ಸಜೀಪಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ಅರ್ಚಕ ಕೃಷ್ಣ ಅರಳಿತಾಯ, ಪರಮೇಶ್ವರ ನೂಯಿ, ಎಂ.ಜಯರಾಮ ಮಯ್ಯ, ಮಿಥುನರಾವ್ ಕನಪಾಡಿ, ಎನ್. ರಾಮಚಂದ್ರ ಮಯ್ಯ, ಶಾಂತರಾಮ ರಾವ್, ಶಶಿಧರ ರಾವ್, ಕಿಶೋರ್ ರಾವ್ ಮೊದಲಾದವರು ಪಾಲ್ಗೊಂಡರು.

ಈ ಸಂದರ್ಭದಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಹಾಗೂ ವ್ಯವಸ್ಥಾಪನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.



