ಬಂಟ್ವಾಳ: ಖಗ್ರಾಸ ಚಂದ್ರ ಗ್ರಹಣ ನಿಮಿತ್ತ ಸೆ.07ರಂದು ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಬಿ.ಸಿರೋಡ್ ಇಲ್ಲಿ ಸಾಮೂಹಿಕ ಶ್ರೀ ಲಲಿತಾ ಸಹಸ್ರನಾಮ ಪಾರಾಯಣ ನಡೆಯಿತು.
ಮಂತ್ರ ಪುಷ್ಪ, ಶಾಂತಿ ಮಂತ್ರ ಪಠಣ, ಗಾಯತ್ರಿ, ಅಷ್ಟಾಕ್ಷರಿ, ಪಂಚಾಕ್ಷರಿ, ಜಪ ಗಣಪತಿ ಅಥರ್ವಶೀರ್ಷ, ರುದ್ರ ಪಠಣವನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು.

ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಏ. ರವಿಶಂಕರ ಮಯ್ಯ, .ಎಂ ಜಯರಾಮ ಮಯ್ಯ, ಮಿಥುನ ರಾವ್ ಕನಪಾಡಿ, ಎನ್ ರಾಮಚಂದ್ರಮಯ್ಯ, ಜಿ.ನಾರಾಯಣ ಭಟ್, ಶಾಂತರಾಮರಾವ್ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಸಮಿತಿ ಅಧ್ಯಕ್ಷ ಲೋಕನಾಥ್ ಶೆಟ್ಟಿ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.



