Breaking
22 Sep 2026, Tue

ಅಮಾಸೆಬೈಲುವಿನಲ್ಲಿ ಮಾಂಸಕ್ಕಾಗಿ ಕೋಣ ಸಾಗಾಟ ಮಾಡುತ್ತಿದ್ದ ಆರೋಪಿಗಳು ಅರೆಸ್ಟ್

ಕುಂದಾಪುರ: ಮಾಂಸಕ್ಕಾಗಿ ಎರಡು ಕೋಣಗಳನ್ನು ಆಹಾರವನ್ನೂ ನೀಡದೆ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಬೇಧಿಸಿದ್ದು ಮೂವರನ್ನು ಆರೋಪಿಗಳನ್ನು ಅಮಾಸೆಬೈಲು ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಸವರಾಜ, ಮೇಘರಾಜ್, ಲೋಹಿತ್, ಇಮ್ರಾನ್ ಬಂಧಿತ ಆರೋಪಿಗಳು.

ಸೆ.6ರಂದು ಇಲ್ಲಿನ ಚೆಕ್ ಪೋಸ್ಟ್ ನಲ್ಲಿ ಅಮಾಸೆಬೈಲು ಪೊಲೀಸ್ ಠಾಣೆಯ ಸಿಬ್ಬಂದಿ ವಿನೋದ್ ಬಿ ಬಾಗಣ್ಣನವರ್ ಸಿಪಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಬೆಳಿಗ್ಗೆ 6 ಗಂಟೆಗೆ ಹುಲಿಕಲ್ ಘಾಟಿ ಕಡೆಯಿಂದ ಚೆಕ್ ಪೋಸ್ಟ್ ಕಡೆಗೆ ಬರುತ್ತಿದ್ದ ವಾಹನವೊಂದನ್ನು ನಿಲ್ಲಿಸುವಂತೆ ಚಾಲಕನಿಗೆ ಸೂಚನೆ ನೀಡಿದ್ದು, ವಾಹನವನ್ನು ತಪಾಸಣೆ ಮಾಡಿದಾಗ ಎರಡು ಕೋಣಗಳಿಗೆ ಯಾವುದೇ ಅಹಾರ ನೀಡದೆ ಹಿಂಸ್ಮಾಕವಾಗಿ ಕಟ್ಟಿ ಹಾಕಿ ತುಂಬಿಕೊಂಡು ಕಂಡುಬಂದಿದೆ.
ಈ ಬಗ್ಗೆ ವಿಚಾರಿಸಿದಾಗ ಜಾನುವಾರುಗಳನ್ನ ಮಾಂಸ ಮಾಡುವ ಉದ್ದೇಶದಿಂದ ಕೊಂಡು ಹೋಗುತ್ತಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ.

ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *