ಬೆಳ್ತಂಗಡಿ: ಜಯಂತ್ ಟಿ ಅವರು ಬುರುಡೆ ಪ್ರಕರಣದ ವಿಚಾರಣೆಗಾಗಿ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಸೆ. 8 ರಂದು ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ.

ಇಂದು ಬೆಳಗ್ಗೆ 10 ಗಂಟೆಗೆ ಮಾಧ್ಯಮಗಳ ಕಣ್ಣು ತಪ್ಪಿಸಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಒಳದಾರಿಯಲ್ಲಿ ಓಡಿ ಕಚೇರಿ ಪ್ರವೇಶ ಮಾಡಿ ವಿಚಾರಣೆಗೆ ಹಾಜರಾಗಿರುವ ಮಾಹಿತಿ ಕೆಲವು ಮೂಲಗಳಿಂದ ಲಭ್ಯವಾಗಿದೆ.

ಈ ಮೂಲಕ ಜಯಂತ್.ಟಿ ಐದನೇ ದಿನದ ಎಸ್.ಐ.ಟಿ ಕಚೇರಿಗೆ ವಿಚಾರಣೆಗಾಗಿ ಒಳಪಡುತ್ತಿದ್ದು, ಇಂದು ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕಲಿದ್ದಾರೆ ಅನ್ನುವ ಕುತುಹೂಲ ಮೂಡಿದೆ.



