Breaking
22 Sep 2026, Tue

ಮಾಸ್ಕ್ ಚಿನ್ನಯ್ಯ ಪರ ಸೆ.6 ರಂದು ಜಾಮೀನು ಅರ್ಜಿ ಸಲ್ಲಿಸಿದ ವಕೀಲರು

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದಲ್ಲಿ ಮಾಸ್ಕ್ ಚಿನ್ನಯ್ಯ ಪರ ಸೆ.6 ರಂದು ಜಾಮೀನು ಅರ್ಜಿ ಇಂದು ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಜಾಮೀನು ಅರ್ಜಿಗೆ ಎಸ್.ಐ.ಟಿ ಪರ ವಕೀಲರು ವಿರೋಧ ವ್ಯಕ್ತಪಡಿಸಿದ್ದು ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯವು ಸೆ.9 ಕ್ಕೆ ಮುಂದೂಡಿದೆ ಅನ್ನುವ ಮಾಹಿತಿ ಇದೆ.

ಚಿನ್ನಯ್ಯ ಪರ ಮಂಗಳೂರು ಉಚಿತ ಕಾನೂನು ಸೇವೆಗಳ ಪ್ರಾಧಿಕಾರದಿಂದ ನೇಮಿಸಿದ ವಕೀಲರು ನ್ಯಾಯಾಲಯಕ್ಕೆ ಹಾಜರಾಗಿ ವಾದ ಮಂಡಿಸಿದ್ದರು.

ಸದ್ಯ ಆರೋಪಿ ಚಿನ್ನಯ್ಯನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದು ಶಿವಮೊಗ್ಗೆ ಜೈಲಿಗೆ ಕಳುಹಿಸಿದ್ದಾರೆ.

Leave a Reply

Your email address will not be published. Required fields are marked *