ಬಂಟ್ವಾಳ: ನೂರುಲು ಇಸ್ಲಾಂ ಮದರಸ ಮತ್ತು ಅಲ್ ಬದ್ರಿಯಾ ಮಸ್ಜಿದ್ ಆಲದ ಪದವಿನ ವಾಮದಪದವಿನಲ್ಲಿ 1500 ನೇ ಈದ್ ಮಿಲಾದ್ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದ ಆದ್ಯಕ್ಷತೆಯನ್ನು ಮಸೀದಿಯ ಅಧ್ಯಕ್ಷರಾದ ಹಂಝ ಬಸ್ತಿಕೋಡಿ ವಹಿಸಿದ್ದರು. ಉದ್ಘಾಟನೆಯನ್ನು ಅಬೂಬಕ್ಕರು ಸಿದ್ದಿಕ್ ಮಹದಾನಿ ನೆರವೇರಿಸಿದರು.

ಮಕ್ಕಳ ವೈವಿಧ್ಯಮಯ ಕಾರ್ಯಕ್ರಮ ನಡೆದು, ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಕಾಲೇಜಿನ ಮುಖ್ಯಸ್ಥರು ಕಂಪ್ಯೂಟರ್ ಸೈನ್ಸ್ ವಿಭಾಗದ ಡಾ. ಮುಸ್ತಫಾ ಬಸ್ತಿಕೋಡಿ ಯವರನ್ನು ವಿಟಿಯುನ ಅಕಾಡೆಮಿಕ್ ಸೆನೇಟ್ ಮೆಂಬರ್ ಆಗಿ ಆಯ್ಕೆಯಾಗಿದ್ದಕ್ಕಾಗಿ ಸನ್ಮಾನಿಸಲಾಯಿತು.

ಮಾವಿನಕಟ್ಟೆ ಮಸೀದಿಯ ಖತೀಬ್ ಮಹಮ್ಮದ್ ನಾಸಿರ್ ಅಹ್ಸನಿ ಉಸ್ತಾದರ ದುವಾ ಮೂಲಕ ಕಾರ್ಯಕ್ರಮ ಕೊನೆಗೊಂಡಿತು.

ವೇದಿಕೆಯಲ್ಲಿ ಅಸ್ಫಾಕ್ ಸಖಾಫಿ ಅಶ್ರಫ್ ಮದನಿ ಅಬ್ದುಲ್ ರಝಾಕ್ ಎಲ್ಪೇಲ್ , ಉಮರ್ ಫಾರೂಕ್ ಬಸ್ತಿಕೋಡಿ, ಸಿರಾಜ್ ಬಸ್ತಿಕೋಡಿ, ಇಮ್ರಾನ್ ಬಸ್ತಿಕೋಡಿ, ಪುತುಮೋನು ನಡಾಯಿ, ಆದಂ ಆಲದ ಪದವು, ಹಾಜಿ ಅಬ್ದುಲ್ ರಹಿಮಾನ್ ಬಸ್ತಿಕೋಡಿ, ಅಬ್ಬಾಸ್ ಬಸ್ತಿಕೊಡಿ, ಬಸೀರ್ ಬಸ್ತಿಕೋಡಿ, ಹಮೀದ್ ಆಲದ ಪದವು, ಬಸೀರ್ ಸಾಹೇಬ್, ಹಾಜಿ ಮೊಹಮ್ಮದ್ ಕರಂಕಿಲ, ಉಸ್ಮಾನ್ ನಾಡಯಿ, ಹಾರಿಸ್ ಬಸ್ತಿಕೋಡಿ ಉಪಸ್ಥಿತರಿದ್ದರು.




