Breaking
23 Mar 2026, Mon

ಬುರುಡೆ ಪ್ರಕರಣದ ಸಾಕ್ಷಿ ದೂರುದಾರ ಚಿನ್ನಯ್ಯನ ಇಂದು ನ್ಯಾಯಾಲಯಕ್ಕೆ ಹಾಜರು

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದ ತನಿಖೆಯನ್ನು ಎಸ್ಐಟಿ ಮುಂದುವರಿಸಿದೆ. ಸಾಕ್ಷಿ ದೂರುದಾರನಾಗಿ ಬಂದ ಚಿನ್ನಯ್ಯನ ಎಸ್.ಐ.ಟಿ ಕಸ್ಟಡಿ ಅವಧಿ ಇಂದು ಮುಕ್ತಾಯವಾಗಿದ್ದು ಆತನನ್ನು ಬೆಳ್ತಂಗಡಿ ನ್ಯಾಯಾಲಯದ ಮುಂದೆ ಅಧಿಕಾರಿಗಳು ಹಾಜರು ಪಡಿಸಿದ್ದಾರೆ.

ಆ. 23 ರಂದು ಚಿನ್ನಯ್ಯ ತಂದಿದ್ದ ಬುರುಡೆಯ ವಿಚಾರದಲ್ಲಿ ಬಂಧಿಸಲಾಗಿತ್ತು.ಅದೇ ದಿನ ಆತನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ಸೆ.3 ರ ವರೆಗೆ ಎಸ್.ಐ.ಟಿ ವಶಕ್ಕೆ ಒಪ್ಪಿಸಿ ಆದೇಶ ನೀಡಿದ್ದರು.

ಇದೀಗ ಆತನ ಕಸ್ಟಡಿ ಅವಧಿ ಮುಗಿದಿದ್ದು ಇವತ್ತು ಸಾಕ್ಷಿ ದೂರುದಾರ ಚಿನ್ನಯ್ಯನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಇತ್ತ ತನಿಖೆಯ ಮುಂದುವರಿದ ಭಾಗವಾಗಿ ಎಸ್ಐ.ಟಿ ತಂಡ ಮಹೇಶ್ ಶೆಟ್ಟಿ ಮನೆ, ಜಯಂತ್ ಟಿ ಮನೆ ಸೇರಿದಂತೆ ಆತ ಉಳಿದು ಕೊಂಡಿದ್ದ ಲಾಡ್ಜ್ ಗಳಲ್ಲಿಯೂ ಆತನನ್ನು ಕರೆದೊಯ್ದು ಮಹಜರು ಪ್ರಕ್ರಿಯೆ ಮಾಡಿತ್ತು.

ಇನ್ನು ಹಲವು ಸ್ಥಳಗಳಲ್ಲಿ ಮಹಜರು ಪ್ರಕ್ರಿಯೆ ನಡೆಯಲಿದ್ದು, ಈ ಹಿನ್ನಲೆ ಸಾಕ್ಷಿ ದೂರು ದಾರನನ್ನು ಎಸ್.ಐ.ಟಿ ತಂಡ ಮತ್ತೆ ವಶಕ್ಕೆ ನೀಡುವಂತೆ ನ್ಯಾಯಾಲಯದ ಮುಂದೆ ಬೇಡಿಕೆ ಸಲ್ಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *