ಬಂಟ್ವಾಳ: ಸ್ವಾತಂತ್ರೋತ್ಸವದ ಅಂಗವಾಗಿ ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಈ ಬಾರಿಯ ಸ್ವಾತಂತ್ರೋತ್ಸವದ ಪ್ರಯುಕ್ತ ತಿರಂಗ ಯಾತ್ರೆಯು ಇಂದು(ಆ. 14)ನಡೆಯಿತು.

ಬಿ. ಸಿ. ರೋಡಿನ ಬಿಜೆಪಿ ಪಕ್ಷದ ಕಚೇರಿಯಿಂದ ಪ್ರಾರಂಭವಾದ ಮೆರವಣಿಗೆಯು ಬ್ರಹ್ಮಶ್ರೀ ನಾರಾಯಣ ಗುರು ವೃತ್ತದವರೆಗೆ ಜಯಘೋಷದಿಂದ ಈ ಮೆರವಣಿಗೆ ನಡೆಯಿತು.

ಈ ಸಂದರ್ಭದಲ್ಲಿ ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು ಆರ್ ಚೆನ್ನಪ್ಪ ಕೋಟ್ಯಾನ್, ಅಮ್ಟಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ವಿಜಯ್ ಗೋವಿಂದ ಪ್ರಭು, ರಾಮ್ ದಾಸ್ ಬಂಟ್ವಾಳ್, ಪ್ರಭಾಕರ್ ಪ್ರಭು ಹಾಗೂ ಪಕ್ಷದ ಅನೇಕ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.



