Breaking
30 Jun 2026, Tue

ಭಂಡಾರಿಬೆಟ್ಟುವಿನಲ್ಲಿ 74ನೇ ವರ್ಷದ ಮೊಸರುಕುಡಿಕೆ ಉತ್ಸವ

ಬಂಟ್ವಾಳ: ಶ್ರೀಕೃಷ್ಣ ಮಂದಿರ ಸೇವಾ ಟ್ರಸ್ಟ್ (ರಿ.) ಭಂಡಾರಿಬೆಟ್ಟು ಶ್ರೀಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಸಮಿತಿ, ಭಂಡಾರಿಬೆಟ್ಟು ಬಂಟ್ವಾಳ ಇದರ ವತಿಯಿಂದ 74ನೇ ವರ್ಷದ ಮೊಸರು ಕುಡಿಕೆ ಉತ್ಸವವು ಆ. 16 ರಂದು ಎಸ್.ವಿ.ಎಸ್. ಪ್ರೌಢಶಾಲಾ ಮೈದಾನ, ಭಂಡಾರಿಬೆಟ್ಟುವಿನಲ್ಲಿ ನಡೆಯಲಿದೆ

ಆ. 15 ರಂದು ಬೆಳಿಗ್ಗೆ 6.30 ಕ್ಕೆ ಗಣಹೋಮ ಹಾಗೂ ಪ್ರಸಾದ ವಿತರಣೆ, ಸಂಜೆ 5 ಗಂಟೆಗೆ ಭಜನಾ ಕಾರ್ಯಕ್ರಮ, ನಂತರ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.

ಆ. 16 ರಂದು ಬೆಳಿಗ್ಗೆ 9 ಗಂಟೆಗೆ ಶ್ರೀ ಕೃಷ್ಣ ಪ್ರತಿಬಿಂಬದ ಶೋಭಾಯಾತ್ರೆ , ಮಧ್ಯಾಹ್ನ 2.30 ಕ್ಕೆ ಆಟೋಟ ಸ್ಪರ್ಧೆಗಳು ಹಾಗೂ ಇತರ ಸ್ಪರ್ಧೆಗಳು ನಡೆಯಲಿದೆ.

ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಶುಭ ಸಮೂಹ ಸಂಸ್ಥೆಗಳ ಮಾಲಕರಾದ ಭುವನೇಶ್ ಪಚ್ಚಿನಡ್ಕ ವಹಿಸಲಿದ್ದು, ಬಂಟ್ವಾಳದ ಎಸ್. ವಿ. ಎಸ್. ಆಂಗ್ಲ ಮಾಧ್ಯಮ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರು ಕುಸುಮಾವತಿ ರವಿ ಪೂಜಾರಿ, ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಪ್ರಧಾನ ವ್ಯವಸ್ಥಾಪಕರು ಭೋಜ ಮೂಲ್ಯ, ಬಂಟ್ವಾಳ ತಾಲೂಕು ಗ್ಯಾರೇಜ್ ಮಾಲಕರ ಸಂಘ ಅಧ್ಯಕ್ಷರು ಸುಧೀರ್ ಪೂಜಾರಿ, ಬಿ.ಸಿ.ರೋಡ್ ಶ್ರೀ ರಾಜಲಕ್ಷ್ಮೀ ಕನ್ಸೆಕ್ಷನ್ ಮತ್ತು ಅರ್ಥ್ಮೂವರ್ಸ್ ನ ಗಣೇಶ್ ಕಾಮಾಜೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮದ ನಿಮಿತ್ತ ರಾತ್ರಿ 7.30ಕ್ಕೆ ಸರಿಯಾಗಿ ಗೆಂದಗಿಡಿ ನಾಟಕ ಪ್ರದರ್ಶನ ಇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *