ಬೆಳ್ತಂಗಡಿ: ಶಿವನಾಗ ಫ್ರೆಂಡ್ಸ್ ಕುದ್ಯಾಡಿ ಆಶ್ರಯದಲ್ಲಿ ಕುದ್ಯಾಡಿಯ ಶಿವನಾಗ ಬಳಿಯ ರತ್ನಾಕರ ಪೂಜಾರಿ ಅವರ ಗದ್ದೆಯಲ್ಲಿ ಆ.10 ರಂದು ಕೆಸರ್ ಡೊಂಜಿ ದಿನ ಕ್ರೀಡಾಕೂಟವು ನಡೆಯಿತು.
ಈ ಕ್ರೀಡಾಕೂಟದಲ್ಲಿ ದ.ಕ. ಜಿಲ್ಲಾ ಮಟ್ಟದ ಹಗ್ಗ ಜಗ್ಗಾಟಕ್ಕೆ ಚಾಲನೆ ನೀಡಿ ಮಾತಾನಾಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ತುಳು ಸಂಸ್ಕೃತಿ, ಪರಂಪರೆ ಉಳಿಯಬೇಕು ಅನ್ನುವ ನಿಟ್ಟಿನಲ್ಲಿ ಆಯೋಜನೆ ಮಾಡಿರುವ ಕೆಸರ್ ಡೊಂಜಿ ದಿನ ಕ್ರೀಡಾಕೂಟ ಶ್ಲಾಘನೀಯ. ಹಿಂದೂ ಸಂಸ್ಕೃತಿ ಉಳಿಸುವ ಇಂತಹ ಕಾರ್ಯ ನಿರಂತರ ನಡೆಯಲಿ, ಶಿವನಾಗ ಫ್ರೆಂಡ್ಸ್‌ನ ಪ್ರತಿಯೊಂದು ಸಮಾಜಮುಖಿ ಕಾರ್ಯಗಳಿಗೆ ನಿರಂತರ ಸಹಕಾರ ನೀಡುತ್ತೇನೆ ಎಂದರು.

ಅಳದಂಗಡಿ ಶ್ರೀ ಸತ್ಯದೇವತೆ ದೈವಸ್ಥಾನದ ಆಡಳಿತ ಮೊಕ್ತೇಸರ ಶಿವಪ್ರಸಾದ್ ಅಜಿಲ ಅವರು ತುಳು ಸಂಸ್ಕೃತಿಯನ್ನು ಬಿಂಬಿಸುವ ಕ್ರೀಡಾಕೂಟದ ಆಯೋಜನೆಯನ್ನು ಶ್ಲಾಘಿಸಿ ಶುಭ ಹಾರೈಸಿದರು. ಕುದ್ಯಾಡಿ ಶಿವನಾಗ ಫ್ರೆಂಡ್ಸ್ ಅಧ್ಯಕ್ಷ ಸುಕೇಶ್ ಪೂಜಾರಿ ಇರಂತೊಟ್ಟು ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಉದ್ಯಮಿ ನಿತ್ಯಾನಂದ ಎನ್. ನಾವರ, ಸುಲ್ಕೇರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗಿರಜಾ, ಉಪಾಧ್ಯಕ್ಷ ಶುಭಕರ ಪೂಜಾರಿ, ಸದಸ್ಯರಾದ ರವಿ ಆರಡೆ, ಪ್ರಗತಿಪರ ಕೃಷಿಕ ರತ್ನಾಕರ ಪೂಜಾರಿ ಇರಂತೊಟ್ಟು,, ಪಿಲ್ಯ ಶ್ರೀರಾಮ ಸಮಿತಿ ಅಧ್ಯಕ್ಷ ಆನಂದ ಪೂಜಾರಿ, ಸದ್ಧರ್ಮ ಯುವಕ ಮಂಡಲದ ಅಧ್ಯಕ್ಷರಾದ ಸದಾನಂದ ಬಿ., ಸುಪ್ರಿತ್ ಜೈನ್ ಅಳದಂಗಡಿ, ಅಳದಂಗಡಿ ಪ್ರಾ.ಕೃ.ಪಸ. ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ, ಶಿವಫ್ರೆಂಡ್ ಪದಾಧಿಕಾರಿಗಳು, ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಸದಾನಂದ ಪೂಜಾರಿ ಸ್ವಾಗತಿಸಿ, ಶುಭಕರ ಪೂಜಾರಿ ವಂದಿಸಿದರು. ಆಮಂತ್ರಣ ಪರಿವಾರದ ವಿಜಯಕುಮಾರ್ ಜೈನ್ ನಿರೂಪಿಸಿದರು.
ಸಂಜೆ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ವಹಿಸಿ, ಇಂತಹ ಕೆಸರಿನ ಗ್ರಾಮೀಣ ಕೂಟಗಳು ದೈಹಿಕ ಆರೋಗ್ಯದ ಜೊತೆ ಮಾನಸಿಕ ಶಕ್ತಿಯನ್ನು ವೃದ್ಧಿಸುತ್ತದೆ. ಇಂತಹ ಆಚರಣೆಗಳಿಂದ ಸಂಸ್ಕೃತಿ ಉಳಿಯಲು ಸಹಕಾರಿ ಎಂದರು.

ಈ ವೇಳೆ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಡಿ. ಪುಷ್ಪಗಿರಿ ಮಾತನಾಡಿ, ಸಮಾಜದಲ್ಲಿ ಒಗ್ಗಟ್ಟು ಮೂಡಿಸುವ ಶಿವನಾಗ ಫ್ರೆಂಡ್ಸ್ ನ ಕಾರ್ಯಕ್ಕೆ ನಿರಂತರ ಸಹಕಾರ ಇದೆ ಎಂದರು. ಕುದ್ಯಾಡಿ ಗರಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿಶ್ವನಾಥ ಪೂಜಾರಿ, ಅಳದಂಗಡಿ ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ, ಗಣೇಶ್ ನಾರಾಯಣ ಪಂಡಿತ್ ಮೂಡುಕೋಡಿ, ಗ್ರಾ.ಪಂ. ಸದಸ್ಯರಾದ ರವಿ ಹಾರಡ್ಡೆ, ನಾರಾಯಣ ಪೂಜಾರಿ ಉಪಸ್ಥಿತರಿದ್ದರು. ವಿಜೇತ ತಂಡಗಳಿಂದ ಬಹುಮಾನ ವಿತರಣೆ ನಡೆಯಿತು.



