Breaking
20 Sep 2026, Sun

ಮಣಿಪಾಲ: ಅಪಾಯಕಾರಿಯಾಗಿ ಕಾರು ಚಾಲನೆ: ಯುವಕ ಪೊಲೀಸ್‌ ವಶಕ್ಕೆ

ಉಡುಪಿ: ಅಪಾಯಕಾರಿಯಾಗಿ ಅತೀ ವೇಗ ಹಾಗೂ ನಿರ್ಲಕ್ಷ್ಯತನದ ಕಾರು ಚಾಲನೆ ಮಾಡಿದ ಕೇರಳ ಮೂಲದ ಯುವಕನನ್ನು ಪೊಲೀಸರು ಮಣಿಪಾಲ ಎಂಐಟಿ ಬಳಿ ವಶಕ್ಕೆ ಪಡೆದಿದ್ದಾರೆ.

ಬಂಧಿತ ಯುವಕನನ್ನು ಕೇರಳ ಕಣ್ಣೂರು ಮೂಲದ ಚಾಲಕ ಶೋಹೈಲ್ ನೀಲಾಕತ್(26) ಎಂದು ಗುರುತಿಸಲಾಗಿದೆ.

ಈತ ಉಡುಪಿ ಕಡೆಯಿಂದ ಹಿರಿಯಡ್ಕ ಕಡೆಗೆ, ಟಿಂಟ್ ಅಳವಡಿಸಿದ ಆಕಾಶ ನೀಲಿ ಬಣ್ಣದ ಕಾರನ್ನು ಅಜಾಗರೂಕತೆಯಿಂದ ಅಪಾಯಕಾರಿಯಾಗಿ ಡ್ರೈವ್ ಮಾಡಿದ್ದು ಮಾತ್ರವಲ್ಲದೇ, ದ್ವಿಚಕ್ರ ವಾಹನಗಳು ಹಾಗೂ ಇತರ ವಾಹನಗಳಿಗೆ ಅಪಘಾತ ಉಂಟು ಮಾಡುವ ರೀತಿಯಲ್ಲಿ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಹೋಗುತ್ತಿದ್ದ. ಈ ವೇಳೆ ಮಣಿಪಾಲ ಪೊಲೀಸ್ ಠಾಣೆ ಸಿಬ್ಬಂದಿ ಹಿಂಬಾಲಿಸಿ ಎಂಐಟಿ ಜಂಕ್ಷನ್ ಬಳಿ ಕಾರನ್ನು ತಡೆದು ವಶಕ್ಕೆ ಪಡೆದುಕೊಂಡಿದ್ದಾರೆ.

ಈತನ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *