ಮುಂಜಾಗ್ರತಾ ಕ್ರಮದಿಂದ ಹೃದಯಘಾತದ ಸಾವಿನಿಂದ ಪಾರಾಗಬಹುದು :ಡಾI ಪದ್ಮನಾಭ ಕಾಮತ್

ಪ್ರತಿಯೊಬ್ಬ ಮನುಷ್ಯರು ತನ್ನ ನಿತ್ಯ ಜೀವನದ ಸಮಯದಲ್ಲಿ ಆರೋಗ್ಯದಲ್ಲಿ ಆಗಬಹುದಾದ ಏರುಪೇರುಗಳ ಬಗ್ಗೆ ನಿಗಾ ವಹಿಸಿಕೊಂಡು ದೇಹದಲ್ಲಿ ವಿಪರೀತ ಬೆವರು , ಎದೆನೋವು , ಎಡ ಕೈ ಸೆಳೆತ , ಸ್ವಲ್ಪ ತಲೆಸುತ್ತುವಿಕೆಯಂತಹ ಲಕ್ಷಣಗಳು ಕಂಡುಬಂದಾಗ ತಕ್ಷಣವೇ ಹತ್ತಿರದ ಕ್ಲಿನಿಕ್ ಗಳಿಗೆ ಅಥವಾ ಸ್ಥಳೀಯ ವೈದ್ಯರನ್ನು ಸಂಪರ್ಕಿಸಿ ಬಿ ಪಿ ಮತ್ತು ರಕ್ತ ಪರೀಕ್ಷೆ ಮಾಡುವುದರೊಂದಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಾಗ ಹೃದಯಘಾತದಿಂದ ಸಂಭವಿಸಬಹುದಾದ ಸಾವುಗಳನ್ನು ನಿಯಂತ್ರಿಸಲು ಸಾಧ್ಯ ಹಾಗೂ ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುವುದು ಅಪಾಯಕಾರಿ . ಈ ನಿಟ್ಟಿನಲ್ಲಿ “ಕೇಡ್ ಹೃತ್ಕುಕ್ಷಿ’ ಎಂಬ ಹೆಸರಿನಲ್ಲಿ ರಾಜ್ಯದಾದ್ಯಂತ ಗ್ರಾಮೀಣ ಭಾಗದ ಜನರಿಗೆ ಅನೂಕೂಲವಾಗುವ ನೆಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ , ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ , ಆರೋಗ್ಯ ಉಪಕೇಂದ್ರ , ಕಮ್ಯೂನಿಟ್ ಹೆಲ್ತ್ ಸೆಂಟರ್ ಸೇರಿದಂತೆ ವಿವಿಧ ಕ್ಲಿನಿಕ್ ಗಳಿಗೆ ಹೃದಯಘಾತದ ಲಕ್ಷಣಗಳ ಮುಂಜಾಗ್ರತೆ ಬಗ್ಗೆ ಪರೀಕ್ಷೆ ಮಾಡುವ ಸಲುವಾಗಿ 1100 ಕ್ಕೂ ಅಧಿಕ ಕೇಂದ್ರಗಳಿಗೆ ಅತ್ಯಾಧುನಿಕ ECG ಪರೀಕ್ಷಾ ಯಂತ್ರಗಳನ್ನು ಉಚಿತವಾಗಿ ನೀಡಲಾಗುತ್ತದೆ ಎಂದೂ ಹೆಸರಾಂತ ಹೃದ್ರೋಗ ತಜ್ಞ ಹಾಗೂ ಪ್ರಧಾನಿ ನರೇಂದ್ರ ಮೋದಿಜೀಯವರಿಂದ ಪ್ರಶಂಸಿಸಲ್ಪಟ್ಟ ಡಾI ಪದ್ಮನಾಭ ಕಾಮತ್ ಸಲಹೆ ನೀಡಿದ್ದಾರೆ.

ಅವರು ಇತ್ತೀಚಿಗೆ ಮಂಗಳೂರಿನ ತನ್ನ ಕ್ಲಿನಿಕ್ನ್ ನಲ್ಲಿ ಬಂಟ್ವಾಳ ತಾಲೂಕಿನಲ್ಲಿ ಸಮಾಜಸೇವೆಯಲ್ಲಿ ಗುರುತಿಸಿಕೊಂಡಿರುವ ಸಿದ್ದಕಟ್ಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭುರವರನ್ನು ಸ್ಮರಣಿಕೆ ನೀಡಿ ಗೌರವಿಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ .

Leave a Reply

Your email address will not be published. Required fields are marked *