ಕಲ್ಲಡ್ಕ : ಭೀಮ್ ಸಂಜೀವಿನಿ ಬೋಳಂತೂರು ಇದರ ಆಶ್ರಯದಲ್ಲಿ ತೃತೀಯ ವರ್ಷದ ಭೀಮ್ ಕ್ರೀಡಾಕೂಟ -2025 ಕಾರ್ಯಕ್ರಮವು ಆ.10 ರಂದು ಬೋಳಂತೂರು ಗ್ರಾಮದ ಬಿ.ಆರ್. ನಗರದಲ್ಲಿ ಗೌರವಧ್ಷಕ್ಷರಾದ ಶ್ರೀನಿವಾಸ ಬಂಗಾರುಕೋಡಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕೂಸಪ್ಪ ಮಾಸ್ತರ್ ಪ್ರಭುಗಳಬೆಟ್ಟು ಜನಸೇವಕರು, ನಿವೃತ ಶಿಕ್ಷಕರು ನೇರವೇರಿಸಿ ಕ್ರೀಡಾಕೂಟಗಳು ವ್ಯಕ್ತಿ ಮತ್ತು ಸಮಾಜ ಎರಡಕ್ಕೂ ಬಹಳ ಮುಖ್ಯ, ಕ್ರೀಡೆಗಳು ಶಿಸ್ತು ತಂಡದ ಕೆಲಸ ಮತ್ತು ನಾಯಕತ್ವದಂತಹ ಜೀವನ ಕೌಶಲ್ಯಗಳನ್ನು ಬೆಳೆಸಲು ಸಹಾಯ ಮಾಡುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಶ್ರೀ ಬಿ. ಚಂದ್ರಶೇಖರ್ ರೈ ನಾರ್ಶ ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕರು ಹಾಲಿ ಗ್ರಾಮ ಪಂಚಾಯತ್ ಸದಸ್ಯರು ಇವರು ಮಾತನಾಡಿ ಗ್ರಾಮದಲ್ಲಿ ಭೀಮ್ ಸಂಜೀವಿನಿಯು ಉತ್ತಮ ಸಮಾಜಮುಖಿ ಕಾರ್ಯಕ್ರಮವನ್ನು ನಡೆಸಿ ಬಂದಿರುತ್ತದೆ ಕ್ರೀಡಾಕೂಟವು ನಮ್ಮಲ್ಲಿ ಹೊಸ ಚೈತನವನ್ನು ನೀಡಿ ಜನರನ್ನು ಮತ, ಜಾತಿ, ಲಿಂಗಭೇದಭಾವವಿಲ್ಲದೆ ಎಲ್ಲರನ್ನು ಒಗ್ಗೂಡಿಸುವುದು ಎಂದರು.

ಇನೋರ್ವ ಮುಖ್ಯ ಅತಿಥಿ ಕಲ್ಲಡ್ಕ ರೈತ ಸೇವ ಸಂಘದ ನಿರ್ದೇಶಕರಾದ ಶ್ರೀ ಜಯರಾಮ್ ರೈ ಗುಡ್ಡೆಮಾರ್ ಇವರು ಮಾತನಾಡಿ ಶ್ರೀಕೃಷ್ಣ ಅಷ್ಟಮಿಯ ಮಹತ್ವ ತಿಳಿಸಿ ಕ್ರೀಡೆಯು ನಮ್ಮ ಜೀವನದಲ್ಲಿ ಅವಿಭಾಜ್ಯ ಪಾತ್ರವನ್ನು ವಹಿಸುತ್ತದೆ. ತಂಡದ ಕೆಲಸ ಶಿಸ್ತು ಸ್ಥಿತಿಸ್ಥಾಪಕತ್ವವನ್ನು ಬೆಳಸುತ್ತದೆ ಎಂದರು. ಶ್ರೀ ಬಿ ಜಯರಾಜ್ ಬೋಳಂತೂರು ಪೋಸ್ಟ್ ಮಾಸ್ಟರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಶ್ರೀ ಕೃಷ್ಣನ ಬಾಲಲೀಲೆಯಲ್ಲಿ ಮೊಸರು ಕುಡಿಕೆಯ ಬಗ್ಗೆ ಸ್ವವಿವರವಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಬೋಳಂತೂರು ಗ್ರಾಮ ಅಧ್ಯಕ್ಷರಾದ ಶ್ರೀಮತಿ ಶಾಲಿನಿ, ಶ್ರೀ ಶಂಕರ್ ವಿ ನಿವೃತ ದೈಹಿಕ ಶಿಕ್ಷಕರು ಬೋಳಂತೂರು, ಭೀಮ್ ಸಂಜೀವಿನಿ ಅಧ್ಯಕ್ಷರಾದ ಶ್ರೀ ಸದಾನಂದ ಬಿ.ಆರ್. ನಗರ, ಶ್ರೀ ಹರೀಶ್ ವಿ ದೈಹಿಕ ಶಿಕ್ಷಕರು ಬೋಳಂತೂರು, ಶ್ರೀಮತಿ ಧನಲಕ್ಷ್ಮಿ ಬ್ಯಾಂಕ್ ಆಫ್ ಬರೋಡಾ ಪೆರ್ನೆ ಶಾಖೆ, ಶ್ರೀ ಹರಿಪ್ರಸಾದ್ ಬೋಳಂತೂರು, ಶ್ರೀಮತಿ ಸೀತಾ ರಾಮಚಂದ್ರ ಅಧ್ಯಕ್ಷರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶ್ರೀಮತಿ ಜಲಜ ಅಧ್ಯಕ್ಷರು ಭೀಮ್ ಸಂಜೀವಿನಿ ಮಹಿಳಾ ಘಟಕ , ಶ್ರೀಮತಿ ಪುಷ್ಪ ಬಿ.ಆರ್. ನಗರ, ಗೌರವ ಸಲಹೆಗಾರರು, ಶ್ರೀಮತಿ ಲಲಿತ ಗೌರವ ಸಲಹೆಗಾರರು, ಶ್ರೀ ಈಶ್ವರ ನಾಯ್ಕ ಉಪಾಧ್ಯಕ್ಷರು, ಶ್ರೀ ಸಂಜೀವ ಉತ್ತಮ ನಗರ ಗೌರವ ಸಲಹೆಗಾರರು, ಶ್ರೀ ಲಿಂಗಪ್ಪ ಬಿ.ಆರ್.ನಗರ, ಶ್ರೀ ವಿಮಲೇಶ್ ಸಿಂಗಾರಿ ತೋಟ ವಕೀಲರು ಪುತ್ತೂರು, ಶ್ರೀಮತಿ ಮಾಲತಿ ಸಾಲೆತ್ತೂರು ಉಪಾಧ್ಯಕ್ಷರು, ಶ್ರೀ ಮಹೇಶ್ ಕಲ್ಪನೆ, ಶ್ರೀ ಹರಿಶ್ಚಂದ್ರ ಕಲ್ಪನೆ ಉಪಸ್ಥಿತರಿದ್ದರು. ಕೃಷ್ಣಪ್ಪ ಕಲ್ಪನೆ ವಂದಿಸಿ, ಮಮತ ಗುಂಡಿ ಮಜಲು ನಿರೂಪಿಸಿದರು.



