ಕಲ್ಲಡ್ಕ: ಯುವ ಪೀಳಿಗೆ ಕಾಣುವ ಕನಸುಗಳಿಗೆ ಅವರ ಭಾವನೆಗಳಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಿದಲ್ಲಿ ಅವರ ಸಾಧನೆ ಅದ್ಬುತವಾಗಲಿದೆ ಎಂದು ಗೋಳ್ತಮಜಲು ಜೆಮ್ ಆಂಗ್ಲ ಮಾಧ್ಯಮ ಶಾಲೆಯ ಚೇರ್ ಮ್ಯಾನ್ ಅಬ್ದುಲ್ ರಝಾಕ್ ಅಭಿಪ್ರಾಯ ಪಟ್ಟರು.

ಅವರು ಇಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ, ಜೆಮ್ ಪಬ್ಲಿಕ್ ಸ್ಕೂಲ್ ಗೋಳ್ತಮಜಲು ಇವರ ಸಂಯುಕ್ತ ಆಶ್ರಯದಲ್ಲಿ ಕಲ್ಲಡ್ಕ ವಲಯ ಮಟ್ಟದ ಪ್ರೌಢಶಾಲಾ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾಟ – 2025 ರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾರಂಭದ ಉದ್ಘಾಟನೆ ಮಾಡಿದ ಪಂದ್ಯಾಟದ ನೋಡಲ್ ಅಧಿಕಾರಿ ಜಗದೀಶ್ ಮಾತಾಡಿ ಪ್ರತಿಯೊಬ್ಬರಲ್ಲೂ ಅದ್ಭುತ ಪ್ರತಿಭೆ ಇದೆ ಆ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಬೆಳಕಿಗೆ ತರುವಲ್ಲಿ ಅವರ ಕಂಪನ್ನು ಎಲ್ಲೆಡೆ ಪಸರಿಸುವಲ್ಲಿ ಹೆತ್ತವರು, ಶಿಕ್ಷಕರು, ರಕ್ಷಕರು, ಮುಂಚೂಣಿಯಲ್ಲಿ ನಿಲ್ಲುವ ಮೂಲಕ ಮಕ್ಕಳಿಗೆ ಶಕ್ತಿ ತುಂಬುವ ಪ್ರಯತ್ನ ಮಾಡಬೇಕು ಎಂದರು.

ವೇದಿಕೆಯಲ್ಲಿ. ಕಲ್ಲಡ್ಕ ಕ್ಲಸ್ಟರ್ ಸಿ.ಆರ್.ಪಿ.ಜ್ಯೋತಿ, ಜೆಮ್ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ಅಹ್ಮದ್ ಮುಸ್ತಫಾ, ಆಡಳಿತ ಮಂಡಳಿ ಟ್ರಸ್ಟಿ ಅಲ್ತಾಫ್ ,ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಅಬ್ದುಲ್ ಹಮೀದ್ ಗೋಳ್ತಮಜಲು, ಜೆಮ್ ಆಂಗ್ಲ ಮಾಧ್ಯಮ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ್, ಕಲ್ಲಡ್ಕ ಶ್ರಿರಾಮ ಪದವಿ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ್, ಉಪಸ್ಥಿತರಿದ್ದರು.

ಜೆಮ್ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕ ನಿರಂಜನ್ ಸ್ವಾಗತಿಸಿ, ಶಿಕ್ಷಕಿಯರದಾ ಭವ್ಯ ಹಾಗೂ ಯಕ್ಷಿತ ಕಾರ್ಯಕ್ರಮ ನಿರೂಪಿಸಿದರು, ವಸಂತಿ ವಂದಿಸಿದರು.
ಫಲಿತಾಂಶ:
ಬಾಲಕರ ವಿಭಾಗದಲ್ಲಿ ಸರಕಾರಿ ಪ್ರೌಢ ಶಾಲೆ ಕಡೆಶಿವಾಲಯ- ಪ್ರಥಮ
ಕರ್ನಾಟಕ ಪ್ರೌಡ ಶಾಲೆ ಮಾಣಿ- ದ್ವಿತೀಯ
ಬಾಲಕಿಯರ ವಿಭಾಗದಲ್ಲಿ ಸರಕಾರಿ ಪ್ರೌಢ ಶಾಲೆ ಶಂಬೂರು- ಪ್ರಥಮ
ಸರಕಾರಿ ಪ್ರೌಢ ಶಾಲೆ ಕಡೆಶಿವಾಲಯ – ದ್ವಿತೀಯ


