Breaking
19 Sep 2026, Sat

ಯೂಟ್ಯೂಬರ್ಸ್ ಮೇಲೆ 50-60 ಜನ ಅಟ್ಯಾಕ್ ಮಾಡಿದ್ದಾರೆ- ಬಿಗ್ ಬಾಸ್ ಖ್ಯಾತಿಯ ರಜತ್ ಆರೋಪ

ಧರ್ಮಸ್ಥಳ: ಯೂಟ್ಯೂಬರ್ಸ್ ಮೇಲೆ 50-60 ಜನ ಅಟ್ಯಾಕ್ ಮಾಡಿದ್ರು, ನನ್ನ ಬಳಿ ಸಾಕ್ಷಿ ಇದೆ ಎಂದು ಬಿಗ್ ಬಾಸ್ ಖ್ಯಾತಿಯ ರಜತ್ ಕಿಶನ್ ಹೇಳಿದ್ದಾರೆ.

ಬುಧವಾರ ಸಂಜೆಯ ವೇಳೆ ಧರ್ಮಸ್ಥಳ ಗ್ರಾಮದ ಪಾಂಗಳ ಎಂಬಲ್ಲಿ ಮೂವರು ಯೂಟ್ಯೂಬರ್ಸ್ ಗಳ ಮೇಲೆ ನಡೆದ ಹಲ್ಲೆ ವಿಚಾರಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ನಾನು ಧರ್ಮಸ್ಥಳಕ್ಕೆ ಹೋಗಿದ್ದು, ಸೌಜನ್ಯ ಕೇಸ್ನಲ್ಲಿ ನ್ಯಾಯ ಕೇಳೋಕೆ ಮಾತ್ರ.

ನಾನು ಯಾವತ್ತೂ ಧರ್ಮಸ್ಥಳದ ಬಗ್ಗೆ ತಪ್ಪಾಗಿ ಮಾತನಾಡಿಲ್ಲ. ನಾನು ಸೌಜನ್ಯ ಕುಟುಂಬಸ್ಥರನ್ನು ಭೇಟಿ ಮಾಡೋಕೆ ಹೋಗಿದ್ದೆ. ಈ ವೇಳೆ ಕಾರು ಮತ್ತು ಬೈಕ್ನಲ್ಲಿ ಗುಂಪು ಹಲ್ಲೆ ನಡೆಸಿ ಯೂಟ್ಯೂಬರ್ಸ್ ಗೆ ಹೊಡೆದು ಕ್ಯಾಮೆರಾ ಕಿತ್ತು ಬಿಸಾಡಿದರು.

ನಾವು ಸೌಜನ್ಯ ಬಗ್ಗೆ ಕೇಳಿದ್ದರೆ, ಅವರೆಲ್ಲಾ ಧರ್ಮ ಅಂತಾ ಮಾತಾಡಿದ್ದರು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Leave a Reply

Your email address will not be published. Required fields are marked *