ಬಂಟ್ವಾಳ: ತಾಲೂಕಿನಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಹಾನಿಯಾದ ಘಟನೆ ಬಿ.ಸಿ. ರೋಡಿನ ಪರ್ಲಿಯಾದಲ್ಲಿ ಬುಧವಾರ ನಡೆದಿದೆ.
ಪರ್ಲಿಯಾ ನಿವಾಸಿ ಅಬ್ದುಲ್ ಕೌಸರ್ ಅವರ ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಹಂಚು ಹಾಗೂ ಮರಮುಟ್ಟುಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಮನೆ ಮಂದಿ ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದಾರೆ ಎಂದು ಕಂದಾಯ ಇಲಾಖೆಯವರು ಮಾಹಿತಿ ನೀಡಿದ್ದಾರೆ.

