Breaking
25 Sep 2026, Fri

ಸಜೀಪಮೂಡ: ಕಾರಜೆಯಲ್ಲಿ ಮಾಜಿ ಸಚಿವ ರಮಾನಾಥ ರೈ ಮಾಲಿಕತ್ವದ “ಶ್ರೀಶೈಲ ಪೆಟ್ರೋಲಿಯಂ” ಉದ್ಘಾಟನೆ

ಬಂಟ್ವಾಳ: ಮಾರ್ನಬೈಲು-ಸಾಲೆತ್ತೂರು ರಾಜ್ಯ ಹೆದ್ದಾರಿಯ ಸಮೀಪ ಸಜೀಪಮೂಡ ಗ್ರಾಮದ ಕಾರಾಜೆ ಎಂಬಲ್ಲಿ ನೂತನವಾಗಿ ನಿಮಾ೯ಣಗೊಂಡ ಶ್ರೀಶೈಲ ಪೆಟ್ರೋಲಿಯಂ ಇದರ ಉದ್ಘಾಟನಾ ಸಮಾರಂಭವು ಇಂದು ನಡೆಯಿತು.

ಶ್ರೀಧಾಮ ಮಾಣಿಲದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ್ ಪರಮಹಂಸ ಸ್ವಾಮೀಜಿ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ರಮಾನಾಥ ರೈ, ಅಮ್ಟುರು ಚರ್ಚ್ ಧರ್ಮಗುರುಗಳು ಫಾಧರ್ ಅನಿಲ್ ಕ್ಯಾನೆಟ್ ಡಿಮೆಲ್ಲೋ , ಕೆ ಎಚ್ ವಿ ಶಾಫಿ ಮದನಿ ಬೊಲ್ಲಯಿ ಜುಮ್ಮಾ ಮಸೀದಿ ಖತೀಬರು, ಉಸ್ಮಾನ್ ಮದನಿ ಧರ್ಮಗುರುಗಳು ಕಾರಜೆ ಮಸೀದಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಸಂಜೀವ ಪೂಜಾರಿ ಬಿರ್ವ, ರಾಜಶೇಖರ್ ರೈ ಕಳ್ಳಿಗೆ, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಂ ಎಸ್ ಮೊಹಮ್ಮದ್, ಸಜಿಪಮೂಡ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶೋಭಾ ಶೆಟ್ಟಿ, ಪುರುಷೋತ್ತಮ ಪೂಜಾರಿ ಕಾರಜೆ, ಮಾಲಕರಾದ ಚರಿಷ್ಮ ರೈ , ಶೈಲೇಶ್ ಕುಚ್ಚಿಗುಡ್ಡೆ, ರಮೇಶ್ ಪಣೋಲಿಬೈಲ್, ಎಂ ಆರ್ ಪಿ ಎಲ್ ಚೀಫ್ ರಿವಿಜಿನಲ್ ಮ್ಯಾನೇಜರ್ ಅರವಿಂದ್ ಆರ್. ಮತ್ತಿತರರು ಉಪಸ್ಥಿತರಿದ್ದರು.

ಗಿರೀಶ್ ಕುಮಾರ್ ಪೆರ್ವ ಸ್ವಾಗತಿಸಿ ಧನ್ಯವಾದವಿತ್ತರು.

Leave a Reply

Your email address will not be published. Required fields are marked *