Breaking
21 Mar 2026, Sat

ಬಂಟ್ವಾಳದಲ್ಲಿ ನಾಗರ ಹಾವು ಕಡಿದು ನವ ವಿವಾಹಿತ ಸಾವು

ಬಂಟ್ವಾಳ: ನಾಗರ ಹಾವು ಕಡಿದು ನವ ವಿವಾಹಿತ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಪಾಂಡವರಕಲ್ಲು ಎಂಬಲ್ಲಿ ಜೂ.3 ರಂದು ಸಂಜೆಯ ವೇಳೆ ನಡೆದಿದೆ.

ಮೃತ ಯುವಕನನ್ನು ಅಶ್ರಫ್ ಪಾದೆ(29) ಎಂದು ಗುರುತಿಸಲಾಗಿದೆ.ಅಡಿಕೆ ಸುಳಿಯುವ ಕೆಲಸಕ್ಕೆಂದು ಹೋದಾಗ ಗೋಣಿಯ ಬದಿಯಲ್ಲಿದ್ದ ನಾಗರ ಹಾವು ಅಶ್ರಫ್ ರವರಿಗೆ ಕಚ್ಚಿದೆ. ತಕ್ಷಣವೇ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾಗಿ ಎಂದು ತಿಳಿದು ಬಂದಿದೆ.

ಮೃತ ಅಶ್ರಫ್ ರವರು 6 ತಿಂಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು ಎಂಬ ಮಾಹಿತಿ ಇದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Leave a Reply

Your email address will not be published. Required fields are marked *