ಸಿದ್ದಕಟ್ಟೆ: ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘವು ತನ್ನ ಕಾರ್ಯ ವ್ಯಾಪ್ತಿಯ ಸದಸ್ಯ ಕೃಷಿಕರಿಗೆ ಅನೂಕೂಲವಾಗುವಂತಾಗಲೂ ಹಾಗೂ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಉತ್ತಮ ಗುಣಮಟ್ಟದ ಹಾಗೂ ಪ್ರತಿಷ್ಟಿತ ಸಂಸ್ಥೆಯ ಬ್ಲೂ ಸಿ ಮೈಲುತ್ತುತ್ತನ್ನು ಸಬ್ಸಿಡಿ ರೂಪದಲ್ಲಿ ವಿತರಣೆ ಮಾಡಲಾಗುವುದು ಹಾಗೂ ರೈತರಿಗೆ ಬೇಕಾಗುವ ರಸಗೊಬ್ಬರ , ಕೀಟನಾಶಕ ಮತ್ತು ಸಾವಯವ ಗೊಬ್ಬರ , ಸುಣ್ಣ ಇತ್ಯಾದಿಗೆ ಒಂದು ಎಕ್ರೆಗೆ ರೂ 25 ಸಾವಿರದಂತೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡಲು ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

ಮೈಲುತುತ್ತು ಕೃಷಿಕರು ಹೊಂದಿರುವ , ಅಡಿಕೆ ತೋಟದ ಜಮೀನಿನ ಆಧಾರದಲ್ಲಿ ವಿತರಣೆ ಮಾಡಲಾಗುವುದು . ಅದೇ ರೀತಿಯಲ್ಲಿ ರಸಗೊಬ್ಬರ , ಕೀಟನಾಶಕ , ಸಾವಯವ ಗೊಬ್ಬರ , ಸುಣ್ಣ,ಮೈಲುತ್ತುತ್ತ್ ನ್ನು ಖರೀದಿ ಮಾಡಲು ಪ್ರತಿ ಎಕ್ರೆಗೆ ರೂ.25000 ರಂತೆ ಗರಿಷ್ಠ 75 ಸಾವಿರದವರೆಗೆ 1 ವರ್ಷದ ಅವಧಿಗೆ ಸಾಲವನ್ನು ನೀಡಲಾಗುವುದು .
ಕಳೆದ ವರ್ಷ ಕೋಳೆ ರೋಗದ ಭಾಧೆಯಿಂದಾಗಿ ಅಡಿಕೆ ಬೆಳೆಗಾರರು ತುಂಬಾ ನಷ್ಟವನ್ನು ಅನುಭವಿಸಿದರಿಂದ ಸಂಘದ ವತಿಯಿಂದ ಕೃಷಿಕರಿಗೆ ತಕ್ಕ ಮಟ್ಟಿನ ಸ್ಪಂದನೆ ನೀಡುವ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ ಎಂದರು.

ಸಂಘದ ವ್ಯಾಪ್ತಿಯಲ್ಲಿನ ಕೃಷಿಕರು ಸಂಘದ ಸಿದ್ದಕಟ್ಟೆ ಕೇಂದ್ರ ಕಛೇರಿ ಸಂಪರ್ಕ ಮಾಡಿ ಇದರ ಪ್ರಯೋಜನವನ್ನು ಪಡೆಯಬೇಕೆಂದು ಮನವಿ ಮಾಡಿರುತ್ತಾರೆ .

ಆಡಳಿತ ಮಂಡಳಿ ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಸಂದೇಶ್ ಶೆಟ್ಟಿ ಪೊಡುಂಬ , ನಿರ್ದೇಶಕರಾದ ಸತೀಶ್ ಪೂಜಾರಿ ,ದಿನೇಶ್ ಪೂಜಾರಿ , ರಶ್ಮಿತ್ ಶೆಟ್ಟಿ ,ಚಂದ್ರಶೇಖರ ಶೆಟ್ಟಿ , ಜಾರಪ್ಪ ನಾಯ್ಕ ,ವೀರಪ್ಪ ಪರವ , ವಿಶ್ವನಾಥ ಶೆಟ್ಟಿಗಾರ್ , ಎ. ಶಿವಗೌಡ , ಮಂದಾರತಿ ಎಸ್ ಶೆಟ್ಟಿ , ಪುಷ್ಪಲತಾ ಎಸ್ ಆರ್ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರತಿ ಶೆಟ್ಟಿ ಸ್ವಾಗತಿಸಿ ಸಹಾಯಕ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಲ್ಲಿಕಾ ಧನ್ಯವಾದವಿತ್ತರು.
