ಬಂಟ್ವಾಳ : ತಾಲೂಕಿನ ಕುಕ್ಕಿಪಾಡಿ ಗ್ರಾಮದ ಕುದ್ಕೋಳಿಯ ಪೆಲತ್ತಬೆಟ್ಟು ಶ್ರೀ ಲೆಕ್ಕೆಸಿರಿ ದೈವಸ್ಥಾನದಲ್ಲಿ ದೈವಗಳ ಪ್ರತಿಷ್ಠೆ ಆಶ್ಲೇಷಾ ಬಲಿ ನೇಮೋತ್ಸವವು ಏ. 24 ರಿಂದ ಏ. 25ರವರೆಗೆ ನಡೆಯಲಿದೆ.

ದೈವಗಳ ಈ ಕಾರ್ಯಕ್ರಮವು ವಿದ್ವಾನ್ ಪ್ರಕಾಶ್ ಆಚಾರ್ಯ ಪಿ. ಇವರ ನೇತೃತ್ವದಲ್ಲಿ ನೆರವೇರಲಿದೆ. ಏಪ್ರಿಲ್.25 ರಂದು ರಾತ್ರಿ 8 ಗಂಟೆಗೆ ದೈವಗಳಿಗೆ ನೇಮೋತ್ಸವ ಸೇವೆ ಇದೆ.

ಹೀಗಾಗಿ ಭಕ್ತರು ತಮ್ಮ ಬಂಧು-ಮಿತ್ರರೊಂದಿಗೆ ಕ್ಷೇತ್ರಕ್ಕೆ ಆಗಮಿಸಿ ದೈವದ ಕೃಪೆಗೆ ಪಾತ್ರರಾಗುವಂತೆ ಕ್ಷೇತ್ರದ ಪದಾಧಿಕಾರಿಗಳು ಹಾಗು ಸರ್ವಸದಸ್ಯರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.




