Breaking
28 Jul 2026, Tue

ಕೊಂಬೇಲುಗುತ್ತು ಕುಟುಂಬಸ್ಥರ ಮನೆಯಲ್ಲಿ ಪುನರ್ ಪ್ರತಿಷ್ಠೆ ಬ್ರಹ್ಮಕುಂಭಾಭಿಷೇಕ, ಪ್ರಸನ್ನ ಪನಿವಾರ ಪೂಜೆ, ಮತ್ತು ಧರ್ಮ ನೇಮೋತ್ಸವ

ಬಂಟ್ವಾಳ: ಕೊಂಬೇಲುಗುತ್ತು ನೂತನ ಧರ್ಮ ಚಾವಡಿ ಹಾಗೂ ಶ್ರೀ ಧರ್ಮಅರಸು ದೈವಂಕುಳು ಮತ್ತು ಪರಿವಾರ ದೈವಗಳ ಕುಂಭಾಭಿಷೇಕದೊಂದಿಗೆ ಪುನರ್‌ಪ್ರತಿಷ್ಠೆ ಹಾಗೂ ಕೊಂಬೇಲುಗುತ್ತು ಧರ್ಮಅರಸು ದೈವಂಕುಳು ಶ್ರೀಕೂಡಮಣಿತ್ತಾಯ ಹಾಗೂ ಪರಿವಾರ ದೈವಗಳ ಧರ್ಮ ನೇಮೋತ್ಸವ ಏ.30 ರಿಂದ ಮೇ.3ವರೆಗೆ ನಡೆಯಲಿದೆ.

ವೇದಮೂರ್ತಿ ಕಾರಿಂಜ ಕೊಡಂಬೆಟ್ಟು ರಾಘವೇಂದ್ರ ಭಟ್ ಹಾಗೂ ವೇದಮೂರ್ತಿ ಸಾಂತ್ಯಾರು ಲಕ್ಷ್ಮಿ ಪ್ರಸಾದ್ ತಂತ್ರಿ ಇವರುಗಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ.

ಈ ಪುಣ್ಯ ದೈವಿಕ ಕಾರ್ಯದಲ್ಲಿ ಭಕ್ತರು ಪಾಲ್ಗೊಂಡು ಸಿರಿಮುಡಿ ಗಂಧ ಪ್ರಸಾದಗಳನ್ನು ಸ್ವೀಕರಿಸಿ ದೈವದ ಕೃಪೆಗೆ ಪಾತ್ರಾರಾಗುವಂತೆ ಸಮಸ್ತ ಕೊಂಬೇಲುಗುತ್ತು ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *