ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿಯ ತತ್ವ ಸಿದ್ಧಾಂತಗಳನ್ನು ಒಪ್ಪಿ, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿ ಹಾಗೂ ಶಾಸಕ ಹರೀಶ್ ಪೂಂಜ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮರೋಡಿ ಗ್ರಾಮದ ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರ್ಪಡೆಗೊಂಡರು.

ವಿಶು ಕುಮಾರ್ ಜೈನ್, ಜಯಪ್ರಕಾಶ್ ಪಾಂಡಿ, ಸಂತೋಷ್ ಕಲ್ಪನೆ, ಯೋಗೇಂದ್ರ ಆಚಾರ್ಯ, ಪ್ರವೀಣ್ ಬಲ್ಲಾಳ, ಶಿವಪ್ರಸಾದ್ ಕಲ್ಪನೆ, ರಮೇಶ್ ಸಾಲಿಯಾನ್ ಬನತ್ಯರಡ್ಡ, ಬಾಲಕೃಷ್ಣ ಪಾದೆ ಹಾಗೂ ನಿತೇಶ್ ಕಲ್ಡೆ, ದೀಕ್ಷಿತ್ ಶೆಟ್ಟಿಯವರು ಶಾಸಕ ಹರೀಶ್ ಪೂಂಜ, ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್ ಹಾಗೂ ಮಂಗಳೂರು ವಿಭಾಗ ಸಹಪ್ರಭಾರಿ ಜಯಂತ್ ಕೋಟ್ಯಾನ್ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಜಯಾನಂದ ಗೌಡ ಮತ್ತು ಪ್ರಶಾಂತ್ ಎಂ. ಪಾರೆಂಕಿ, ಜಿಲ್ಲಾ ಮನ್ ಕಿ ಬಾತ್ ಪ್ರಮುಖ್ ಸೀತಾರಾಮ್ ಬೆಳಾಲು, ಮುಖಂಡರಾದ ಸದಾನಂದ ಉಂಗಿಲಬೈಲು, ಮೋಹನ್ ಅಂಡಿಂಜೆ, ರತ್ನಾಕರ್ ಬುಣ್ಣನ್, ಪದ್ಮಶ್ರೀ ಜೈನ್, ರಾಜೇಶ್ ಮೂಡುಕೋಡಿ, ಮಾಜಿ ಪಂಚಾಯತ್ ಸದಸ್ಯರು, ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.




