ಬಂಟ್ವಾಳ: ದ.ಕ.ಜಿ.ಪಂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿವನಗರ ಮಾವಿನಕಟ್ಟೆಯಲ್ಲಿ 80ನೇ ವರ್ಷದ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಯತೀಶ್ ಶೆಟ್ಟಿ ವಿಜಯನಗರ ದ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಎಸ್.ಡಿ.ಎಮ್ ಸಿ ಅಧ್ಯಕ್ಷರಾದ ಶ್ರೀಮತಿ ಶೀಲಾ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿಕೊಂಡಿದ್ದು ಮುಖ್ಯ ಅತಿಥಿಗಳಾಗಿ ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ವನಿತಾ, ಮಾಜಿ ಸದಸ್ಯರಾದ ನಾಗೇಶ್ ಎಂ., ಬಡವರ ಬಂದು ಸೇವಾ ಟ್ರಸ್ಟ್ ರಿ. ಕುಕ್ಕಿಪಾಡಿ ಇದರ ಅಧ್ಯಕ್ಷರಾದ ಗುರುರಾಜ್ ಕುಕ್ಕಿಪಾಡಿ, ಕಾರ್ಯದರ್ಶಿ ಹಾಗೂ ಸೂಕ್ತ ನ್ಯೂಸ್ ನ ಮಾಲಕರಾದ ಪ್ರದೀಪ್ ಕುಕ್ಕಿಪಾಡಿ, ಟ್ರಸ್ಟಿಗಳಾದ ಹರೀಶ್ ಪೂಜಾರಿ, ಕಾಸಿಂ, ವಿಮಲಾ, ಎಸ್ ಡಿ ಎಮ್ ಸಿ ಉಪಾಧ್ಯಕ್ಷರಾದ ರಾಜೇಶ್, ಮುರಳೀಧರ,ಅಂಗನವಾಡಿ ಶಿಕ್ಷಕಿ ಸುರೇಖ, ಸಹಾಯಕಿ ದೇವಕಿ, ಮಕ್ಕಳ ಪೋಷಕರು, ಮಕ್ಕಳು ಉಪಸ್ಥಿತರಿದ್ದರು.

ಈ ಸಂಧರ್ಭದಲ್ಲಿ ಬಡವರ ಬಂಧು ಸೇವಾ ಟ್ರಸ್ಟ್ ರಿ.ಕುಕ್ಕಿಪಾಡಿ ಇವರ ವತಿಯಿಂದ ಶಾಲಾ ಮಕ್ಕಳಿಗೆ ಐಡಿ ಕಾರ್ಡ್ ಹಾಗೂ ಸಿಹಿತಿಂಡಿ ಹಾಗೂ ದಾನಿಗಳ ಸಹಕಾರದಲ್ಲಿ ಉಚಿತ ನೋಟ್ ಪುಸ್ತಕ, ಶಿಕ್ಷಣ ಇಲಾಖೆಯಿಂದ ಕೊಡಮಾಡಿದ ಶಾಲಾ ಮಕ್ಕಳ ಪಾದರಕ್ಷೆಯನ್ನು ವಿತರಿಸಲಾಯಿತು.

ಶಾಲಾ ಮುಖ್ಯ ಶಿಕ್ಷಕರಾದ ವಸಂತ ಪೂಜಾರಿ ಸ್ವಾಗತಿಸಿ, ಶಿಕ್ಷಕಿ ಲಕ್ಷ್ಮೀ ಕೆ. ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಜ್ಯೋತಿ, ಬಬಿತಾ ಕಾರ್ಯಕ್ರಮ ನಿರ್ವಹಿಸಿದರು. ದೇಶ ಭಕ್ತಿ ಸಾರುವ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.




