Breaking
7 Mar 2026, Sat

ಮಾ. 8 ರಂದು ಕಿನ್ನಿಬೆಟ್ಟುವಿನಲ್ಲಿ ಯುವಶಕ್ತಿ ಕಲಾ ವೃಂದದ 40ನೇ ವಾರ್ಷಿಕೋತ್ಸವ

ಬಂಟ್ವಾಳ: ಯುವಶಕ್ತಿ ಕಲಾ ವೃಂದ (ರಿ.) ಕಿನ್ನಿಬೆಟ್ಟು, ಬಂಟ್ವಾಳ ಇದರ 40ನೇ ವಾರ್ಷಿಕೋತ್ಸವವು ಮಾ. 8 ರಂದು ಕಿನ್ನಿಬೆಟ್ಟು ಮೈದಾನದಲ್ಲಿ ನಡೆಯಲಿದೆ.

ಈ ವಾರ್ಷಿಕೋತ್ಸವದ ಪ್ರಯುಕ್ತ ಯುವ ಪ್ರಶಸ್ತಿ ಪುರಸ್ಕೃತರಾದ ಉದ್ಯಮಿಗಳು, ಸಮಾಜ ಸೇವಕರು ಹಾಗೂ ಶುಭ ಗ್ರೂಪ್ಸ್ ಮಾಲಕರಾದ ಭುವನೇಶ್ ಪಚ್ಚಿನಡ್ಕ, ಉದ್ಯಮಿಗಳು ಹಾಗೂ ಸಮಾಜ ಸೇವಕಾರು ಶ್ರೀ ಲಕ್ಷ್ಮೀ ಜ್ಯುವೆಲ್ಲರ್ಸ್ ಮಾಲಕರಾದ ತಿಲಕ್ ಪೂಜಾರಿ, ಉದ್ಯಮಿಗಳು ಹಾಗೂ ಸಮಾಜ ಸೇವಕರಾದ ರಾಜಲಕ್ಷ್ಮೀ ಜ್ಯುವೆಲ್ಲರ್ಸ್ ಮಾಲಕರಾದ ಅಶೋಕ್ ಕುಮಾರ್ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.

ಇದೇ ಸಂದರ್ಭದಲ್ಲಿ ಯುವಶಕ್ತಿ ಕಲಾ ವೃಂದ (ರಿ.)ಮಾಜಿ ಅಧ್ಯಕ್ಷರು ಆಲ್ವಿನ್ ಲೋಬೋ, ಯುವಶಕ್ತಿ ಕಲಾ ವೃಂದ (ರಿ.)ಮಾಜಿ ಅಧ್ಯಕ್ಷರು ಲೋಕೇಶ್ ಸುವರ್ಣ, ಉದ್ಯಮಿಗಳಾದ ಸುಭಾಶ್ಚಂದ್ರ ಜೈನ್, ಯುವಶಕ್ತಿ ಕಲಾ ವೃಂದ (ರಿ.)ಮಹಿಳಾ ಸದಸ್ಯರಾದ ಕವಿತಾ ಆಚಾರ್ಯ, ಕರಾಟೆ ಪಟುವಿನಲ್ಲಿ ಸಾಧನೆಗೈದ ವಿದ್ಯಾರ್ಥಿನಿಗಳಾದ ಶಿರಾಲಿ ಎಸ್. ಸುವರ್ಣ, ತನಿಷ್ಠ ಆ‌ರ್. ಸುವರ್ಣ, ಎಂ. ಆರ್. ಗಹನ್ ಕುಲಾಲ್ ಇವರನ್ನು ಸನ್ಮಾನಿಸಲಾಗುತ್ತದೆ.

ಸಂಜೆ 6 ಗಂಟೆಗೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾತ್ರಿ 9.30 ಗಂಟೆಗೆ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ, ಮೂಲ್ಕಿ, ದ.ಕ. ಇವರಿಂದ ಪೌರಾಣಿಕ ಪ್ರಸಂಗ ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ ಪ್ರದರ್ಶನಗೊಳ್ಳಲಿದೆ. ರಾತ್ರಿ 8 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.

Leave a Reply

Your email address will not be published. Required fields are marked *