ಬಂಟ್ವಾಳ: ವಿಧಾನಸಭಾ ಕ್ಷೇತ್ರ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ “ನರೇಗಾ ಮರಳಿಸಿ ಉದ್ಯೋಗದ ಹಕ್ಕು ಉಳಿಸಿ” ನರೇಗಾ ಬಚಾವೋ ಸಂಗ್ರಾಮ ಬೃಹತ್ ಪಾದಯಾತ್ರೆಯೂ ಇಂದು(ಜ. 28) ನಡೆಯಿತು.

ಈ ಪಾದಯಾತ್ರೆಗೆ ಮಾಜಿ ಸಚಿವ ಬಿ ರಮನಾಥ ರೈ ಚಾಲನೆಯನ್ನು ನೀಡಿದ್ದು ಬಳಿಕ ಮಣಿಹಳ್ಳದಿಂದ ಬಿಸಿರೋಡು ಕೈಕಂಬದವರೆಗೆ ಬಂದ ಈ ಯಾತ್ರೆ ಮತ್ತೆ ಕೈಕಂಬದಿಂದ ಬಿಸಿರೋಡಿನ ಮಿನಿವಿಧಾನ ಸೌಧದವರೆಗೆ ಸಾಗಿತು.

ರಕ್ತೇಶ್ವರಿ ದೇವಸ್ಥಾನದ ಸಮೀಪದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಬಿ ರಮನಾಥ ರೈ ಅವರು “ನರೇಗಾ ಯೋಜನೆಯಲ್ಲಿ ಮಹಾತ್ಮಾ ಗಾಂಧಿಯವರ ಹೆಸರು ತೆಗೆಯುವುದರ ಜೊತೆಗೆ ಯೋಜನೆಯ ಮೂಲಸ್ವರೂಪವನ್ನೇ ಬದಲಾಯಿಸುವ ಬಿಜೆಪಿ ನಿರ್ಧಾರದ ಕುರಿತು ಕಿಡಿಕಾರಿದ್ರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ಕಾಂಗ್ರೆಸ್ ಪ್ರಮುಖರಾದ ಬೇಬಿ ಕುಂದರ್, ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮಹಮ್ಮದ್, ಪದ್ಮಶೇಖರ್ ಜೈನ್, ಸುದರ್ಶನ ಜೈನ್, ಅಬ್ಬಾಸ್ ಆಲಿ,ಪಿಯೂಸ್ ಎಲ್ ರೋಡ್ರಿಗಸ್ ಅಶ್ವಿನಿ ಕುಮಾರ್ ರೈ,ಮಮತಾ ಗಟ್ಟಿ, ಮಲ್ಲಿಕಾ ಶೆಟ್ಟಿ, ಜಯಂತಿ ಪೂಜಾರಿ, ಸದಾಶಿವ ಬಂಗೇರ, ನಾವಜ್ ಬಡಕಬೈಲು,ವೆಂಕಪ್ಪ ಪೂಜಾರಿ,ಸಿದ್ದೀಕ್ ಬೊಗೊಡಿ,ಮಹಮ್ಮದ್ ನಂದಾವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.






