Breaking
29 Jun 2026, Mon

ಸಮುದ್ರದ ಅಲೆಗಳಿಗೆ ಸಿಲುಕಿದ ಕಾಲೇಜು ವಿದ್ಯಾರ್ಥಿಗಳನ್ನು ರಕ್ಷಿಸಿದ ಸ್ಥಳೀಯರು

ಸುರತ್ಕಲ್ : ಎನ್‌ಐಟಿಕೆ ಬೀಚ್‌ಗೆ ಈಜಲು ಇಳಿದ ವೇಳೆ ಸಮುದ್ರದ ಅಲೆಗಳ ತೀವ್ರತೆಗೆ ಸಿಲುಕಿದ ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳನ್ನು ಸ್ಥಳೀಯರು ರಕ್ಷಿಸಿದ ಘಟನೆ ಜ.27ರಂದು ನಡೆದಿದೆ.

ಅಪಾಯದಿಂದ ಪಾರಾದ ವಿದ್ಯಾರ್ಥಿಗಳನ್ನು ಶಶಾಂಕ್ (20) ಹಾಗೂ ಸಂದೀಪ್ (20) ಎಂದು ಗುರುತಿಸಲಾಗಿದೆ.

ಈಜಲು ಸಮುದ್ರದ ನೀರಿಗೆ ಇಳಿದ ಸಂದರ್ಭದಲ್ಲಿ ಜೋರಾಗಿ ಅಲೆಗಳು ಬರಲಾರಾಂಭಿಸಿದ್ದವು. ಈ ಅಲೆಗಳನ್ನು ಕಂಡು ಗಾಬರಿಗೊಂಡ ವಿದ್ಯಾರ್ಥಿಗಳು ನೀರಿನ ಸೆಳೆತಕ್ಕೆ ಸಿಲುಕಿ ಅಪಾಯದಲ್ಲಿದ್ದರು. ಇದನ್ನು ಗಮನಿಸಿದ ಸ್ಥಳೀಯರಾದ ರಂಝಾ, ನಂದಕಿಶೋರ್ ಎಂಬವರು ಟ್ಯೂಬ್ ಇತ್ಯಾದಿ ಬಳಸಿ ಅವರನ್ನು ರಕ್ಷಿಸಿದ್ದಾರೆ.

ಘಟನೆಯ ನಂತರ ತಕ್ಷಣವೇ ವಿದ್ಯಾರ್ಥಿಗಳನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *