ಬಂಟ್ವಾಳ: ತಾಲೂಕು ಗಾಣಿಗರ ಸೇವಾ ಸಂಘದ ವತಿಯಿಂದ ಪಾಣೆಮಂಗಳೂರಿನಲ್ಲಿ ಜ. 26 ರಂದು ಕ್ರೀಡೋತ್ಸವ ಕಾರ್ಯಕ್ರಮವು ನಡೆಯಿತು.
ಈ ಕಾರ್ಯಕ್ರಮದಲ್ಲಿ ಉಳ್ಳಾಲ ಉಳಿಯ ಉಳ್ಳಾಲ್ತಿ ಧರ್ಮರಸರ ಕ್ಷೇತ್ರದ ಧರ್ಮದರ್ಶಿ ದೇವು ಮೂಲ್ಯಣ್ಣ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕೃಷ್ಣಪ್ಪ ಗಾಣಿಗ, ಯುವ ವೇದಿಕೆ ಅಧ್ಯಕ್ಷ ಭುವನೇಶ್ ಮೊಗರ್ನಾಡು, ಮಹಿಳಾ ಸಮಿತಿ ಅಧ್ಯಕ್ಷೆ ಆಶಾ ವೇದವ ಗಾಣಿಗ, ಪ್ರಮುಖರಾದ ಬಾಲಕೃಷ್ಣ ಮಾಸ್ಟರ್, ನರ್ಸಪ್ಪ ಅಮೀನ್, ವೇದವ ಗಾಣಿಗ, ಬಾಲಕೃಷ್ಣ ಸೆರ್ಕಳ, ಸಚಿನ್ ಮೆಲ್ಕಾರ್, ಪ್ರಸಾದ್ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು.




