ಬಂಟ್ವಾಳ: ಹಿಂದೂ ಸಂಗಮ ಆಯೋಜನ ಸಮಿತಿ ವೇಣೂರು ತಾಲೂಕು ಹೊಸಂಗಡಿ ಮಂಡಲ ಆಶ್ರಯದಲ್ಲಿ ಆರಂಬೋಡಿ, ಕಾಶಿಪಟ್ನಾ, ಬಡಕೋಡಿ ಹಾಗೂ ಹೊಸಂಗಡಿ ಗ್ರಾಮಗಳನ್ನು ಒಳಗೊಂಡ ಬೃಹತ್ ಹಿಂದೂ ಸಂಗಮ ಕಾರ್ಯಕ್ರಮವು ಫೆ. 1 ರಂದು ಆರಂಬೋಡಿ ಗಿರಿ ಮೈದಾನದ ಬಳಿ ನಡೆಯಲಿದೆ.

ಈ ಕಾರ್ಯಕ್ರಮವು ಹೊಕ್ಕಾಡಿಗೋಳಿ ಕೂಡುರಸ್ತೆಯಿಂದ ಪೂಂಜ ಗಿರಿಮೈದಾನದವರೆಗೆ ಭವ್ಯ ಶೋಭಾಯಾತ್ರೆ ನಡೆಯಲಿದ್ದು ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಈ ರಾಷ್ಟ್ರ ಕಾರ್ಯದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




