ವಿಟ್ಲ: ಗ್ರಾಮೀಣ ಪ್ರದೇಶಕ್ಕೊಂದು ಆಂಗ್ಲ ಮಾಧ್ಯಮ ಶಾಲೆಯ ಕನಸು ಕಂಡು 1986ರಲ್ಲಿ ವಿಟ್ಲದಲ್ಲಿ ವಿಠಲ್ ಜೇಸಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯನ್ನು ಸ್ಥಾಪಿಸಿ, ಸಂಸ್ಥೆಯ ಅಧ್ಯಕ್ಷರಾಗಿ 2024ರ ಜೂನ್ ವರೆಗೂ ಕರ್ತವ್ಯ ನಿರ್ವಹಿಸಿದ ಶಿಕ್ಷಣ ಪ್ರೇಮಿ, ಶಿಕ್ಷಣ ಸಂಘಟಕ ದಿ. ಎಲ್.ಎನ್.ಕೂಡೂರು ಅವರ ಸುಧೀರ್ಘ ಆಡಳಿತ ಮತ್ತು ವಿವಿಧ ಕ್ಷೇತ್ರಗಳಲ್ಲಿ ಅವರ ಸಾಧನೆಯನ್ನು ಗುರುತಿಸಿ, ಮಾನ್ಯತೆ ಪಡೆದ ಅನುದಾನರಹಿತ ಶಾಲೆಗಳ ಸಂಘ, ಕರ್ನಾಟಕ ರೂಪ್ಸ(RUPSA) 2024-25 ನೇ ಸಾಲಿನ ರಾಜ್ಯಮಟ್ಟದ ಉತ್ತಮ ಆಡಳಿತ (ಆಡಳಿತಗಾರ ) ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಈ ಪ್ರಶಸ್ತಿಯನ್ನು ಅ.21 ರಂದು ಬೆಂಗಳೂರಿನ ಜುಬಿಲಿ ಅಂತಾರಾಷ್ಟ್ರೀಯ ಆಡಿಟೋರಿಯಂ ನಲ್ಲಿ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರಿಂದ ಪತ್ನಿ ಸಿರಿ ಎಲ್.ಎನ್.ಕೂಡೂರು ಸ್ವೀಕರಿಸಿದರು.
ವಿಠಲ್ ಜೇಸಿ ಆಂಗ್ಲ ಮಾಧ್ಯಮ ಪ್ರೌಢಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಅಗಲಿದ ಸಾಧಕರಿಗೆ, ಸಹಕರಿಸಿದ ಆಡಳಿತ ಮಂಡಳಿಯ ಸಾಧನೆಗೆ, ಪ್ರಶಸ್ತಿ ನೀಡಿದ ಸಂಸ್ಥೆಗೆ ಹಾಗೂ ಸಂಸ್ಥೆಯ ಸಾಧನೆಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದೆ.