Breaking
10 May 2026, Sun

ಬಂಟ್ವಾಳ ತಾಲೂಕು ಸಹಕಾರ ಭಾರತೀಯ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

ಬಂಟ್ವಾಳ: ಬಂಟ್ವಾಳ ತಾಲೂಕು ಸಹಕಾರ ಭಾರತೀಯ ಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಬಂಟ್ವಾಳ ತಾಲೂಕಿನ ನೇರಳಕಟ್ಟೆ ಸೊಸೈಟಿಯ ಸಭಾಂಗಣದಲ್ಲಿ ಅ.15 ರಂದು ನಡೆಯಿತು.

ಸಭೆಯಲ್ಲಿ ರಾಜ್ಯ ಸಹಕಾರ ಭಾರತೀಯ ಪ್ರಧಾನ ಕಾರ್ಯದರ್ಶಿ ನರಸಿಂಹ ಕಾಮತ್, ದ.ಕ ಜಿಲ್ಲಾ ಅಧ್ಯಕ್ಷ ಬಿ ಸುಧಾಕರ ರೈ ಬೋಳಂತೂರು, ದ.ಕ ಜಿಲ್ಲಾ ಮಹಿಳಾ ಪ್ರಮುಖರಾದ ಸುಭದ್ರ ರಾವ್ ಅವರುಗಳ ಉಪಸ್ಥಿತಿಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಬಂಟ್ವಾಳ ಸಹಕಾರ ಭಾರತೀಯ ನೂತನ ಅಧ್ಯಕ್ಷರಾಗಿ ನೇರಳಕಟ್ಟೆ ಸೊಸೈಟಿಯ ಅಧ್ಯಕ್ಷರಾಗಿ ಪುಷ್ಪರಾಜ ಚೌಟ, ಪ್ರಧಾನ ಕಾರ್ಯದರ್ಶಿಯಾಗಿ ಬಂಟ್ವಾಳ ಸಮಾಜ ಸೇವಾ ಬ್ಯಾಂಕಿನ ನಿರ್ದೇಶಕರಾಗಿ ಅರುಣ್ ಕುಮಾರ್ ಸಜೀಪ, ಹಾಗು ಮಹಿಳಾ ಪ್ರಮುಖರಾಗಿ ಪುದು ಹಾಲು ಸೊಸೈಟಿಯ ನಿರ್ದೇಶಕರಾದ ಶಾಂತಾ ಚೌಟ ರವರನ್ನು ಆಯ್ಕೆ ಮಾಡಲಾಯಿತು.

ರಾಜ್ಯ ಸಹಕಾರ ಭಾರತೀಯ ಪ್ರಧಾನ ಕಾರ್ಯದರ್ಶಿ ನರಸಿಂಹ ಕಾಮತ್, ಸಹಕಾರ ಭಾರತೀಯ ಪದಾಧಿಕಾರಿಗಳ ಜವಾಬ್ದಾರಿ ಹಾಗೂ ಕರ್ತವ್ಯ ಗಳ ಬಗ್ಗೆ ಮಾಹಿತಿ ನೀಡಿದರು.

ವಿಟ್ಲ ಗ್ರಾಮೀಣ ಬ್ಯಾಂಕ್ ನಿರ್ದೇಶಕ ವಿಶ್ವನಾಥ ಎಂ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *