Breaking
29 Jun 2026, Mon

ನಕಲಿ ಕೀ ಗಳನ್ನು ಬಳಸಿ ಕಳ್ಳತನ ಮಾಡಿದ್ದ ಐದು ಆರೋಪಿಗಳ ಬಂಧನ

ಉಡುಪಿ: ಆಭರಣ ಅಂಗಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಅಂತರರಾಜ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ನಿವಾಸಿಗಳಾದ ಶುಭಂ ತಾನಾಜಿ ಸಾಠೆ (25), ಪ್ರವೀಣ್ ಅಪ್ಪಾ ಸಾಠೆ (23), ನೀಲೇಶ್ ಬಾಪು ಕಸ್ತೂರಿ (19), ಸಾಗರ್ ದತ್ತಾತ್ರೇಯ ಕಂದಗಲೆ (32), ಮತ್ತು ಬಾಗವ್ ರೋಹಿತ್ ಶ್ರೀಮಂತ್ (25) ಎಂದು ಗುರುತಿಸಲಾಗಿದೆ.

ಸೆ. 9, 2025 ರಂದು ವೈಭವ್ ಮೋಹನ್ ಘಾಟ್ಗೆ ಅವರ ಆಭರಣ ಅಂಗಡಿಗೆ ಕಳ್ಳರು ನಕಲಿ ಕೀಲಿಗಳನ್ನು ಬಳಸಿ ಸುಮಾರು 95.71 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆ ಎಂದು ದೂರು ದಾಖಲಿಸಿದ್ದರು.

ಅಂಗಡಿ ಮಾಲಿಕ ನೀಡಿದ ದೂರಿನ ಮೇರೆಗೆ ಉಡುಪಿಯ ಪೊಲೀಸ್‌ ಇನ್ಸ್‌ಪೆಕ್ಟರ್ ಮಂಜುನಾಥ್ ವಿ ಬಡಿಗೇರ್ ನೇತೃತ್ವದಲ್ಲಿ ಉಡುಪಿ ಪೊಲೀಸ್ ಸಿಬ್ಬಂದಿಯ ವಿಶೇಷ ತಂಡ, ಮಹಾರಾಷ್ಟ್ರದ ಅಕ್ಲುಜ್ ಪೊಲೀಸರ ಬೆಂಬಲದೊಂದಿಗೆ, ಸೆ. 12 ರಂದು ಸೋಲಾಪುರ ಜಿಲ್ಲೆಯ ಮಲ್ಶಿರಾಸ್ ತಾಲ್ಲೂಕಿನ ನೀಮ್‌ಗಾವ್‌ನಿಂದ ಐವರು ಆರೋಪಿಗಳನ್ನು ಬಂಧಿಸಿ, ಆರೋಪಿಗಳಿಂದ 74.88 ಲಕ್ಷ ರೂ. ಮೌಲ್ಯದ 748.8 ಗ್ರಾಂ ಚಿನ್ನಾಭರಣಗಳು, 3.6 ಲಕ್ಷ ರೂ. ಮೌಲ್ಯದ 4.445 ಕೆಜಿ ಬೆಳ್ಳಿ, 5 ಲಕ್ಷ ರೂ. ನಗದು ಮತ್ತು ಅಪರಾಧಕ್ಕೆ ಬಳಸಲಾದ 4 ಲಕ್ಷ ರೂ. ಮೌಲ್ಯದ ಮಾರುತಿ ಸ್ವಿಫ್ಟ್ ಕಾರನ್ನು ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *