Breaking
24 Mar 2026, Tue

ಸೌದಿ ಅರಬಿಯಾದಲ್ಲಿ ಬಸ್ಸಿಗೆ ಬಸ್ ಡಿಕ್ಕಿ ಹೊಡೆದು ಅಪಘಾತ: ಮಂಗಳೂರು ಮೂಲದ ಯುವಕ ಸಾವು

ಮಂಗಳೂರು: ಸೌದಿ ಅರಬಿಯಾದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಂಗಳೂರು ಮೂಲದ ಯುವಕನೊಬ್ಬ ಮೃತಪಟ್ಟ ಘಟನೆ ನಡೆದಿದೆ.

ಮಂಗಳೂರು ಹೊರವಲಯದ ಉಳ್ಳಾಲ ಮಿಲ್ಲತ್ ನಗರದ ನಿವಾಸಿ ಮುಹಮ್ಮದ್ ಎಂಬವರ ಪುತ್ರ ಅಬ್ದುಲ್ ರಾಝಿಕ್ (27) ಎಂದು ಗುರುತಿಸಲಾಗಿದೆ.

ಸೌದಿ ಅರೇಬಿಯಾದ ಜುಬೈಲ್ನ ಪಾಲಿಟೆಕ್ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಅಬ್ದುಲ್ ರಾಝಿಕ್ ಸೆ.14ರಂದು ಸಂಜೆ ವೇಳೆ ರಾತ್ರಿ ಪಾಳಿ ಕೆಲಸಕ್ಕೆಂದು ಬಸ್ನಲ್ಲಿ ತೆರಳುತ್ತಿದ್ದಾಗ ಇವರು ಸಂಚರಿಸುತ್ತಿದ್ದ ಬಸ್ಸಿಗೆ ಇನ್ನೊಂದು ಬಸ್ ಢಿಕ್ಕಿ ಹೊಡೆದು ಈ ರಸ್ತೆ ಅಪಘಾತ ಸಂಭವಿಸಿದೆ.

ಈ ವೇಳೆ ಗಂಭೀರವಾಗಿ ಗಾಯಗೊಂಡ ರಾಝಿಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಅನ್ನುವ ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *