ಕಾರ್ಕಳದಲ್ಲಿ ಅಡಿಕೆ ತೋಟದ ಶೆಡ್ನಿಂದ ಅಡಿಕೆ ಕಳವು: 12 ಅಪ್ರಾಪ್ತರ ಬಂಧನ, 5 ಲಕ್ಷ ಮೌಲ್ಯದ ಅಡಿಕೆ ವಶಕ್ಕೆ

ಕಾರ್ಕಳ: ಅಡಿಕೆ ತೋಟದ ಶೆಡ್ನಿಂದ ಅಡಿಕೆ ಕಳವಾದ ಪ್ರಕರಣವನ್ನು ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸರು ಸೆ. 8 ರಂದು ಬೇಧಿಸಿದ್ದಾರೆ.

ಮುಂಡ್ಕೂರು ಗ್ರಾಮದಲ್ಲಿ ರವೀಂದ್ರ ಎಂಬವರ ಅಡಿಕೆ ತೋಟದ ಶೆಡ್ನಿಂದ 5 ಲಕ್ಷ ರೂ. ಮೌಲ್ಯದ ಅಡಕೆ ಕಳವಾಗಿತ್ತು. ಈ ಪ್ರಕರಣದ ಬೆನ್ನು ಬಿದ್ದ ಪೊಲೀಸರು ಒಟ್ಟು 12 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಅಪ್ರಾಪ್ತರಾಗಿದ್ದು ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿತರಿಂದ 5 ಲಕ್ಷ ರೂ. ಮೌಲ್ಯದ 1,100 ಕೆಜಿ ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದೆ.

ವಿಚಾರಣೆಯ ವೇಳೆ ಬಟ್ಟೆ ಖರೀದಿ ಸೇರಿದಂತೆ ಇನ್ನಿತರ ಮೋಜು ಮಸ್ತಿಗಾಗಿ ಅಡಿಕೆ ಕಳವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ಅಧಿಕ್ಷಕ ಹರಿರಾಮ್ ಶಂಕರ್, ಹೆಚ್ಚುವರಿ ಪೊಲೀಸ್ ಅಧಿಕ್ಷಕ ಸುಧಾಕರ್, ಕಾರ್ಕಳ ಉಪವಿಭಾಗ ಸಹಾಯಕ ಪೊಲೀಸ್ ಅಧಿಕ್ಷಕಿ ಹರ್ಷ ಪ್ರಿಯಾಂವದ ಅವರ ಮಾರ್ಗದರ್ಶನದಲ್ಲಿ ಕಾರ್ಕಳ ವೃತ್ತ ನೀರಿಕ್ಷಕ ಮಂಜಪ್ಪ ಅವರ ನೇತೃತ್ವದಲ್ಲಿ ಕಾರ್ಕಳ ಗ್ರಾಮಾಂತರ ಠಾಣೆ ಪಿಎಸ್ಐ ಯವರಾದ ಪ್ರಸನ್ನ ಎಂ.ಎಸ್. ಮತ್ತು ಸುಂದರ, ಎಎಸ್ಐಗಳಾದ ಪ್ರಕಾಶ್, ಸುಂದರ ಗೌಡ ಮತ್ತು ಸಿಬ್ಬಂದಿ ರುದ್ರೇಶ್, ಚಂದ್ರಶೇಖರ, ಮಹಾಂತೇಶ್, ಜಿಲ್ಲಾ ಪೊಲೀಸ್ ಕಚೇರಿ ಸಿಡಿಆರ್ ಸಿಬ್ಬಂದಿ ದಿನೇಶ್ ಮತ್ತು ನಿತಿನ್ ಅವರ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.

Leave a Reply

Your email address will not be published. Required fields are marked *