ಮಂಜೇಶ್ವರ: ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಕಾಸರಗೋಡಿಗೆ ಸಾಗಿಸುತ್ತಿದ್ದ 9 ಲೀಟರ್ ಅಕ್ರಮ ವಿದೇಶ ಮದ್ಯವನ್ನು ವಶಪಡಿಸಿರುವ ಎಕ್ಸೆಸ್ ಅಧಿಕಾರಿಗಳು ಓವ೯ನನ್ನು ಬಂಧಿಸಿದ ಘಟನೆ ಸೆ. 09 ರಂದು ನಡೆದಿದೆ.

ಆರೋಪಿಯನ್ನು ಮೊಗ್ರಾಲು ವಿಲ್ಲೇಜ್ ವ್ಯಾಪ್ತಿಯ ನೀರೋಳ್ ನಿವಾಸಿ ಶಿವಪ್ರಸಾದ್(26) ಎಂದು ಗುರುತಿಸಲಾಗಿದೆ.
ಮಂಜೇಶ್ವರ ಎಕ್ಸೆಸ್ ಚೆಕ್ ಪೋಸ್ಟ್ ನಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಈ ವೇಳೆ ಆರೋಪಿಯಿಂದ 9 ಲೀಟರ್ ಅಕ್ರಮ ವಿದೇಶ ಮದ್ಯವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.




