ಸುಬ್ರಹ್ಮಣ್ಯ : ಕುಮಾರಧಾರ ನದಿಗೆ ಕಸ ಹಾಕಿದವರಿಗೆ 2 ಸಾವಿರ ರೂಪಾಯಿ ದಂಡವನ್ನು ಸುಬ್ರಹ್ಮಣ್ಯ ಗ್ರಾಮಪಂಚಾಯತ್ ವಿಧಿಸಿದೆ.
ಕುಮಾರಧಾರ ಸೇತುವೆಯ ಮೇಲೆ ಕಾರ್ಕಳ ಮೂಲದ ವೇದವ್ಯಾಸ ತಂತ್ರಿ ಎಂಬವರು ವಾಹನದಿಂದ ಕಸ ಬಿಸಾಡುತ್ತಿರುವುದನ್ನು ಸ್ಥಳೀಯ ಯುವಕರೊಬ್ಬರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ವಿಡಿಯೋ ಮಾಡಿದ್ದು, ಈ ದೃಶ್ಯವನ್ನು ತಕ್ಷಣವೇ ಸುಬ್ರಹ್ಮಣ್ಯ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ರವಾನಿಸಿದ್ದಾರೆ.

ಪಂಚಾಯತಿ ಅಧಿಕಾರಿಗಳು ಕಸ ಎಸೆದ ವ್ಯಕ್ತಿಯ ವಾಹನದ ವಿವರವನ್ನು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ಬಳಿಕ ವಿಚಾರಣೆ ನಡೆಸಿದ ಪೊಲೀಸರು ವೇದವ್ಯಾಸ ತಂತ್ರಿ ಅವರಿಗೆ 2 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ ಎಂದು ತಿಳಿದುಬಂದಿದೆ.




