Breaking
29 Jun 2026, Mon

ಮಂಗಳೂರಿನಲ್ಲಿ ಕಟ್ಟಡದಿಂದ ಜಿಗಿದು ಯುವತಿ ಆತ್ಮಹತ್ಯೆ

ಮಂಗಳೂರು: ಕಟ್ಟಡದಿಂದ ಜಿಗಿದು ಪ್ರಾಣ ಬಿಟ್ಟ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಮುಖ್ಯಪ್ರಾಣ ದೇವಸ್ಥಾನ ಸಮೀಪ ಗೋಲ್ಡನ್ ಚೇಂಬರ್ ಬಳಿ ಸೆ.8 ರಂದು ನಡೆದಿದೆ.

ಮೃತ ಯುವತಿಯನ್ನು ಖುಷಿ ಎಂದು ಗುರುತಿಸಲಾಗಿದೆ.ಈಕೆ ಸಾಯುವುದಕ್ಕೂ ಮುನ್ನ “ನನ್ನ ಮನೆಯವರೇ ನನ್ನನ್ನು ಅರ್ಥ ಮಾಡಿಕೊಳ್ಳಲಿಲ್ಲ, ಬೇರೆಯವರಿಂದ ನಿರೀಕ್ಷಿಸುವುದೇ ಸಾಧ್ಯವೇ?” ಎಂದು ಸ್ಟೇಟಸ್ ಹಾಕಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪ್ರಾಥಮಿಕ ತನಿಖೆ ಪ್ರಕಾರ, ಯುವತಿಯು ಮಾನಸಿಕ ಒತ್ತಡದಲ್ಲಿದ್ದು, ಕುಟುಂಬದಿಂದ ಬೇಕಾದ ಪ್ರೀತಿ, ಬೆಂಬಲ ಮತ್ತು ಆತ್ಮೀಯ ಸಂವಹನದ ಕೊರತೆಯಿಂದ ಈ ನಿರ್ಧಾರಕ್ಕೆ ಬಂದಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ.

ನಗರದ ಬಂದರ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *