Breaking
23 Sep 2026, Wed

ಉಪ್ಪಿನಂಗಡಿ ಕಡಂಬಿನಲ್ಲಿನ ಗೋ ಹತ್ಯೆಗೆ ಹಿಂದೂ ಸಮಾಜ ತಕ್ಕ ಉತ್ತರ ನೀಡಲಿದೆ – ಅರುಣ್ ಕುಮಾರ್ ಪುತ್ತಿಲ

ಪುತ್ತೂರು: ಗೋಕಳ್ಳರ ಅಟ್ಟಹಾಸ ಇಂದು ಮಿತಿಮೀರುತ್ತಿದೆ. ಇದರಿಂದ ಇಡೀ ಹಿಂದೂ ಸಮಾಜ ಬೇಸತ್ತು ಹೋಗಿದೆ ಎಂದು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಬೇಸರ ಹೊರ ಹಾಕಿದ್ದಾರೆ.

ಉಪ್ಪಿನಂಗಡಿ ಕಡಂಬಿನಲ್ಲಿ ನಡೆದ ಗೋ ಮಾತಾ ಸಂರಕ್ಷಣಾ ಚಳವಳಿ ಉದ್ಧೇಶಿಸಿ ಮಾತನಾಡಿದ ಅವರು ಗೋಕಳ್ಳರ ಅಟ್ಟಹಾಸಕ್ಕೆ ಕಾಂಗ್ರೇಸ್ ನಲ್ಲಿರುವ ಹಿಂದೂಗಳೂ ನೊಂದಿದ್ದಾರೆ.

ಇದೇ ಕಾರಣಕ್ಕೆ ಕಾಂಗ್ರೇಸ್ ಶಾಸಕರೇ ಗೋಕಳ್ಳರ ಕೈ ಕಡಿಯಿರಿ ಎಂದು ಸೂಚನೆ ನೀಡಿದ್ದಾರೆ. ಕಾಂಗ್ರೆಸ್ ಶಾಸಕರ ಮಾತಿನಂತೇ ಹಿಂದೂ ಸಮಾಜ ಮುಂದೆ ಮಾಡಲಿದೆ. ಗೋಕಳ್ಳರ ಹೆಸರಿನಲ್ಲಿ ಯಾರನ್ನೋ ಪೊಲೀಸರು ಬಂಧಿಸಿದ್ದಾರೆ. ನಮಗೆ ನೈಜ ಆರೋಪಿಗಳ ಬಂಧನವಾಗಬೇಕು

ಈ ಪ್ರಕರಣದ ಹಿಂದೆ ಸ್ಥಳೀಯರ ಕೈವಾಡವಿದೆ. ಇಂತಹ ಘಟನೆಗಳು ಹೀಗೆ ಮುಂದುವರಿದಲ್ಲಿ ಹಿಂದೂ ಸಮಾಜ ತಕ್ಕ ಉತ್ತರ ನೀಡಲಿದೆ ಎಂದು ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *