Breaking
12 May 2026, Tue

ಕೊಯಿಲ: ಅ.01 ಮತ್ತು 2ರಂದು 23ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಹಾಗೂ ಮಹಾ ಚಂಡಿಕಯಾಗ

ಬಂಟ್ವಾಳ: ಹಿಂದೂ ಧರ್ಮೋತ್ಥಾನ ವೇದಿಕೆ ಟ್ರಸ್ಟ್ (ರಿ.) ರಾಯಿ, ಕೊಯಿಲ ಅರಳ ಇದರ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಆಯೋಜಿಸಿರುವ 23ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಹಾಗೂ ಮಹಾ ಚಂಡಿಕಯಾಗ ಅ.01 ಹಾಗೂ 02ರಂದು ಕೊಯಿಲ ಹನುಮಾನ್ ನಗರದ ಮಾವಂತೂರು ದಿ. ದೇವಪ್ಪ ಶೆಟ್ಟಿ ವೇದಿಕೆಯಲ್ಲಿ ನಡೆಯಲಿದೆ.

ಈ ಕುರಿತು ಪ್ರಕಟನೆಯಲ್ಲಿ ಮಾಹಿತಿ ನೀಡಿರುವ ಅವರು 2 ದಿನವೂ ವಿವಿಧ ಧಾರ್ಮಿಕ ಸಾಂಸ್ಕೃತಿಗಳು ಹಾಗೂ ವೈದಿಕ ಕಾರ್ಯಕ್ರಮಗಳು ಅತ್ಯಂತ ವಿಜೃಂಭನೆಯಿಂದ ನಡೆಯಲಿದ್ದು ಅ. 01 ಬುಧವಾರದಂದು ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ, ಮಹಾಪೂಜೆ, ಭಜನಾ ಸೇವೆ ಹಾಗೂ ಸಂಜೆ ಗಂಟೆ 7 ಗಂಟೆಗೆ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಅ. 2 ಗುರುವಾರದಂದು ಬೆಳಿಗ್ಗೆ 9.30 ಗಂಟೆಗೆ ಅರಳ , ಪಂಜಿಕಲ್ಲು, ಕೊಯಿಲ , ರಾಯಿ ಗ್ರಾಮಗಳನ್ನೊಳಗೊಂಡ ಅರಳ ಮಂಡಲ ಮಟ್ಟದ ಪೂರ್ಣ ಗಣವೇಷಧಾರಿ ಆರ್‌ ಎಸ್‌ ಎಸ್‌ ಸ್ವಯಂ ಸೇವಕರಿಂದ ಶತಾಬ್ದಿ ವಿಜಯ ದಶಮಿ ಉತ್ಸವ ನಡೆಯಲಿದೆ. ಬೆಳಿಗ್ಗೆ 11.30 ಕ್ಕೆ ಸಭಾ ಕಾರ್ಯಕ್ರಮ ನಡೆದು, ಸಂಜೆ 5:30ಕ್ಕೆ ಮಹಾಪೂಜೆ ನಡೆದು ಬಳಿಕ ವಿವಿಧ ವೇಷಭೂಷಣ, ಸ್ಥಬ್ಧಚಿತ್ರಗಳು, ವಾದ್ಯ ಘೋಷಗಳೊಂದಿಗೆ ಶಾರದಾ ಮಾತೆಯ ವೈಭವದ ಶೋಭಾಯಾತ್ರೆ ನಡೆಯಲಿದೆ ಎಂದು ತಿಳಿಸಿದ್ಧಾರೆ.

Leave a Reply

Your email address will not be published. Required fields are marked *