Breaking
20 Sep 2026, Sun

ಉತ್ತರ ಪ್ರದೇಶ: ಮದುವೆಯಾಗುವಂತೆ ಒತ್ತಾಯಿಸಿದ್ದ ಮಹಿಳೆಯನ್ನು ಯುವಕನೊಬ್ಬ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಲಕ್ನೋ ಎಂಬಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಇಲ್ಲಿನ ಫರೂಕಾಬಾದ್ ಜಿಲ್ಲೆಯ ನಿವಾಸಿ ರಾಣಿ (52) ಎಂದು ಗುರುತಿಸಲಾಗಿದೆ. ಅರುಣ್ ರಜಪೂತ್ (26) ಬಂಧಿತ ಆರೋಪಿ. ಈತನಿಂದ ಎರಡು ಮೊಬೈಲ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿ ಯುವಕ ರಜಪೂತ್ ಕೊಲೆಯಾದ ಮಹಿಳೆ ರಾಣಿ ಅವರಿಗೆ ಒಂದೂವರೆಗೆ ವರ್ಷದ ಹಿಂದೆ ಇನ್ಸ್ಟಾಗ್ರಾಮ್ ಮೂಲಕ ಪರಿಚಿತರಾಗಿದ್ದರು. ಇಬ್ಬರ ನಡುವಿನ ಆನ್ಲೈನ್ ಚಾಟಿಂಗ್ ನಿಂದ ಸ್ನೇಹ ಪ್ರೇಮಕ್ಕೆ ತಿರುಗಿದೆ.

ಹೀಗಾಗಿ ಇಬ್ಬರು ಆಗಾಗ ಫರೂಕಾಬಾದ್ ನ ಹೋಟೆಲ್ಗಳಲ್ಲಿ ಭೇಟಿಯಾಗುತ್ತಿದ್ದರು. ರಾಣಿಗೆ 4 ಮಕ್ಕಳಿದ್ರೂ, ಆಕೆ ರಜಪೂತ್ ಜತೆ ಸಂಬಂಧ ಹೊಂದಿದ್ದು ರಜಪೂತ್ಗೆ 1.50 ಲಕ್ಷ ರೂ.ಗಳನ್ನು ನೀಡಿದ್ದರು ಎಂದು ವರದಿ ತಿಳಿಸಿದೆ.

ಕೆಲ ದಿನಗಳ ಹಿಂದೆ ಮದುವೆಯಾಗುವಂತೆ ರಾಣಿ ರಜಪೂತ್ಗೆ ಹೇಳಿದ್ದಾರೆ. ಮಾತ್ರವಲ್ಲ ಇದರ ಜೊತೆ ಕೊಟ್ಟ ಹಣ ವಾಪಾಸ್ ನೀಡುವಂತೆ ಹೇಳಿದ್ದಾರೆ. ಇದು ರಜಪೂತ್ ಸಿಟ್ಟಿಗೆ ಕಾರಣವಾಗಿತ್ತು. ಇದರಿಂದಾಗಿ ಆರೋಪಿಯು ಕೋಪದಿಂದ ಅವಳ ಕತ್ತು ಹಿಸುಕಿ ಕೊ*ಲೆ ಮಾಡಿ ಪರಾರಿಯಾಗಿದ್ದಾನೆ. ತನಿಖೆಯ ವೇಳೆ ಇಬ್ಬರ ನಡುವಿನ ಕಾಲ್ ರೆಕಾರ್ಡ್ಸ್ , ಚಾಟ್ಗಳನ್ನು ಪರಿಶೀಲಿಸಿದ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *